ನಾಟಕಗಳು ನಾಡಿನ ಸಂಸ್ಕøತಿ ಸಾಹಿತ್ಯದ ಶ್ರೀಮಂತಿಕೆ ಹೆಚ್ಚಿಸುತ್ತದೆಃ ಸೈಯದ ನವಾಜ್

ಬೀದರ:ಫೆ.5: ದಕ್ಷಿಣ ಕ್ಷೇತ್ರದ ಚಿಟ್ಟಾ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯ ಯುವಕರ ಸಂಘ ಚಿಟ್ಟಾ ಇವರ ಸಂಯುಕ್ತಾಶ್ರದಲ್ಲಿ ಧರ್ಮದ ಅಣ್ಣ ಕರ್ಮದ ತಮ್ಮ ಎನ್ನುವ ಸಾಮಾಜಿಕ ನಾಟಕವನ್ನು ಪ್ರದರ್ಶನಗೊಂಡಿತು. ರಂಗಕಲಾವಿದ ಶೇಷಪ್ಪಾ ಚಿಟ್ಟಾ, ಮುಖ್ಯ ಪಾತ್ರವನ್ನು, ಸಿದ್ದು ಕಟ್ಟಿಮನಿ ಸುನೀಲ ಕಡ್ಡೆ ಯೇಸುದಾಸ ಶರಣು ಡಿಲೇಮಾ ವಿಜಯ ಲಕ್ಷಿ??ೀ ಅನುಷ್ಯಾಬಾಯಿ ಸಾಗರ ದಿನಕರ ಮಾಯವತಿ ಮುಂತಾದವರು ವಿವಿಧ ಪಾತ್ರಗಳಲ್ಲಿ ನಾಟಿವನ್ನು ಪ್ರದರ್ಶನ ಮಾಡಿದರು. ತಮ್ಮ ಅಣ್ಣನಿಗೆ ಅನೇಕ ಕಷ್ಟಗಳನ್ನು ಕೊಟ್ಟರು ಅಣ್ಣ ತನ್ನ ಧರ್ಮಪಾಲನೆ ಮಾಡಿ ಕುಟುಂಬಕ್ಕೆ ಕೆಟ್ಟ ಹೆಸರು ಬರದಹಾಗೆ ನೋಡಿಕೊಂಡನು ಕೊನೆಗು ಅಣ್ಣನ ಧರ್ಮಕ್ಕೆ ತಮ್ಮ ಶರಣಾದನು ಕುಟುಂಬದ ಸಮಾಜದ ಮೌಲ್ಯದ ಬಗ್ಗೆ ತಿಳಿಸಿಕೊಟ್ಟಿರುವ ನಾಟಕ ಗ್ರಾಮಸ್ಥರ ಮೇಚ್ಚುಗೆಯನ್ನು ಪಡೆದುಕೊಂಡಿತು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂ ಮಾಜಿ ಸದಸ್ಯ ಬಸಪ್ಪಾ ಗ್ರಾಮದ ಮುಖಂಡರಾದ ಸುಲ್ತಾನ ಶಾಹ, ಕರವೇ ಜಿಲ್ಲಾ ಗೌರವ ಅಧ್ಯಕ್ಷ ಸೈಯದ ನವಾಜ್ ಉದ್ಘಾಟಿಸಿ, ಸಾಹಿತ್ಯಕ್ಕೆ ಜೀವತುಂಬಿ ನಾಡಿನ ಉತ್ತಮ ಸಂಸ್ಕೃತಿಯನ್ನು ಪ್ರಸಾರ ಮಾಡುವ ಸಮಾಜ ಕಾರ್ಯವನ್ನು ನಾಟಗಳು ಮಾಡುತ್ತಿವೆಯೆಂದರು.