ನಾಟಕಗಳಿಂದ ಸಾಮಾಜಿಕ ಮೌಲ್ಯಗಳು ವೃದ್ಧಿಸುತ್ತದೆ

ಹರಪನಹಳ್ಳಿ.ಜ.೧೪ : ತಾಲ್ಲೂಕಿನ ಯರಬಾಳು ಸಾರ್ವಜನಿಕರನ್ನು ಸಾಮಾಜಿಕವಾಗಿ ಜಾಗೃತಿಗೊಳಿಸಲು ನಾಟಕಗಳು ಪ್ರಮುಖ ಪಾತ್ರವಹಿಸಿವೆ ಎಂದು ಮುಖಂಡ ಬಾಲೆನಹಳ್ಳಿ ಕೆಂಚನಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.ಯರಬಳ್ಳಿ ಗ್ರಾಮದಲ್ಲಿ ಹುಲಿಗೆಮ್ಮ, ದುರ್ಗಾಂಬಿಕ ದೇವಿ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ನಾಟಕದ ವೇದಿಕೆಯಲ್ಲಿ ಭಾಗವಹಿಸಿ ಮಾತನಾಡಿದರು.ನಾಟಕಗಳಲ್ಲಿ ಬರುವ ಪಾತ್ರ, ಸನ್ನಿವೇಶಗಳ ಧನಾತ್ಮಕ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಾದರಿ ಜೀವನ ನಡೆಸಬೇಕು. ನಾಟಕಗಳಿಂದ ಸಾಮಾಜಿಕ ಮೌಲ್ಯಗಳು ವೃದ್ಧಿಸುತ್ತದೆ. ಮಕ್ಕಳನ್ನು ಮೊಬೈಲ್, ಟಿವಿ, ಸಿನಿಮಾಗಳಿಂದ ದೂರವಿರಿಸಿ ಶಿಕ್ಷಣದ ಮಹತ್ವವನ್ನು ಮನದಟ್ಟು ಮಾಡಬೇಕು ಎಂದರು.ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ಸಿದ್ದಪ್ಪ, ಸೊಕ್ಕೆ ನಾಗರಾಜ್ ಮುಖಂಡ ಸಂತೋಷ್, ಹನುಮಂತಪ್ಪ, ಸದ್ಯೋಜ್ಯಾತಪ್ಪ, ಭೀಮಪ್ಪ, ಚೌಡಮ್ಮ, ಮಂಜುಳಾ, ರೇವಣಸಿದ್ದಪ್ಪ, ಆನಂದ, ಸಿದ್ದೇಶ್ ಅವರು ಇದ್ದರು.