ನಾಚಹಳ್ಳಿಯಲ್ಲಿ ಸುರನಾಗ,ಅಶ್ವಥ್ಥನಾರಾಯಣ ಪ್ರತಿಷ್ಟಾಪನೆ

ಕೋಲಾರ,ಏ.೧೯:ತಾಲ್ಲೂಕಿನ ವೇಮಗಲ್ ಹೋಬಳಿಯ ನಾಚಹಳ್ಳಿ ಗ್ರಾಮದಲ್ಲಿ ಕೋವಿಡ್ ಮಾರಿ ತಡೆಗಾಗಿ ಸುರಸನಾಗ ಸಮೇತ ಶ್ರೀ ಅಶ್ವಥ್ಥನಾರಾಯಣಸ್ವಾಮಿ ನೂತನ ಶಿಲಾ ಬಿಂಭ ಪ್ರತಿಷ್ಠಾಪನಾ ಮಹೋತ್ವವನ್ನ ಇಂದು ಹಮ್ಮಿಕೋಳ್ಳಲಾಗಿದ್ದು, ನಾಗರ ಕಲ್ಲುಗಳ ಸುಂದರ ದೇಗುಲ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
ಕೋವಿಡ್ ಮಾರಿಯ ವಿರುದ್ದ ಈ ದೇಗುಲ ನಿರ್ಮಿಸಿದ್ದು, ಪೂಜಾ ಕಾರ್ಯಗಳು ಈಗಾಗಲೇ ಆರಂಭಗೊಂಡಿದೆ. ನಾಗದೇವರುಗಳ ಮೂರ್ತಿಗಳ ಪ್ರತಿಷ್ಟಾಪನೆಗೆ ಸಿದ್ದತೆಗಳು ನಡೆದಿವೆ. ಇಡೀ ನಾಚಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಸೇರಿ ಈ ಕಾರ್ಯವನ್ನು ಮಾಡುತ್ತಿದ್ದು, ಪೂಜಾ ಕಾರ್ಯದಲ್ಲಿ ಆಗಮಿಕರಾಗಿ ಕದರೀಪುರದ ಕೆ.ಎಲ್.ವೇಣುಗೋಪಾಲ, ಕೆ.ಎಸ್.ಶ್ರೀರಂಗಾಚಾರ್, ಮಹೀಧರ್ ನೇತೃತ್ವ ವಹಿಸಿದ್ದಾರೆ.
ಇಂದು ಬೆಳಗ್ಗೆ ೫ ಗಂಟೆಗೆ ಸುಪ್ರಭಾತ ಸೇವೆ, ಪಿಂಡಿಕಾ ಪೂಜೆ, ನವರತ್ನಗಳ ಸಹಿತ ಸುರಸನಾಗ ಸಮೇತ ಅಶ್ವಥ್ಥನಾರಾಯಣ ಸ್ವಮಿ ಅಷ್ಟಬಂಧನ ಪೂರ್ವಕ ಮಹಾ ಪ್ರತಿಷ್ಟಾ ಕಾರ್ಯಗಳು ಆರಂಭಗೊಳ್ಳಲಿವೆ.
ಬೆಳಗ್ಗೆ ೬-೩೦ಕ್ಕೆ ಪ್ರಾಣ ಪ್ರತಿಷ್ಟೆ ನಡೆಯಲಿದ್ದು, ಜೀವಾಧಿತತ್ವನ್ಯಾಸ ಹೋಮ, ನವಗ್ರಹ ಹೋಮ, ಮೂರ್ತಿ ಹೋಮ ಗ್ರಾಮದೇವರ ಹೋಮ, ಮೃತ್ಯುಂಜಯ ಹೋಮ, ಶಾಂತಿಮೋಮಗಳು ನಡೆಯಲಿದ್ದು, ಬೆಳಗ್ಗೆ ೯ ಗಂಟೆಗೆ ಪೂರ್ಣಾಹುತಿ ನೀಡಲಾಗುತ್ತಿದೆ.
ಈ ಪೂಜಾ ಕಾರ್ಯದಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸುವ ಮೂಲಕ ಸಾಂಗವಾಗಿ ನಡೆಸಲು ಗ್ರಾಮಸ್ಥರು ತೀರ್ಮಾನಿಸಿದ್ದು, ಇದಕ್ಕಾಗಿ ಬೃಹತ್ ಪೆಂಡಾಲ್ ಹಾಕಿ ಪೂಜೆಗೆ ಸಿದ್ದತೆ ನಡೆಸಿದ್ದಾರೆ.