ನಾಗ ಚೈತನ್ಯ-ಶೋಭಿತಾ ಫೋಟೋ ವೈರಲ್

ಹೈದರಾಬಾದ್, ಮಾ. ೩೧- ಇತ್ತೀಚೆಗೆ ಕೆಲದಿನಗಳಿಂದ ನಾಗ ಚೈತನ್ಯ ಹಾಗೂ ಶೋಭಿತಾ ಅವರ ಡೆಟೀಂಗ್‌ವಿಚಾರ ಸಖತ್‌ಸುದ್ದಿ ಮಾಡಿದೆ.
ನಾಗ ಚೈತನ್ಯಹಾಗೂ ಶೋಭಿತಾ ಧುಲಿಪಾಲ್ ಅವರು ಇತ್ತೀಚೆಗೆ ಲಂಡನ್ನಲ್ಲಿ ಡೇಟಿಂಗ್ ಮಾಡಿದ್ದರು.
ನಟಿಯ ಜೊತೆ ನಾಗ ಚೈತನ್ಯ ಹೋಟೆಲ್‌ನಲ್ಲಿ ಇರೋ ಫೋಟೋ ವೈರಲ್ ಆಗಿತ್ತು. ಈ ಫೋಟೋದಿಂದ ಇವರಿಬ್ಬರ ಮಧ್ಯೆ ಏನೋ ನಡೆಯುತ್ತಿದೆ ಎನ್ನುವ ವಿಚಾರ ಅಭಿಮಾನಿಗಳಿಗೆ ಸ್ಪಷ್ಟವಾಗಿತ್ತು.
ಇದೀಗ ಈ ಫೋಟೋ ವೈರಲ್ ಮಾಡಿದ ವ್ಯಕ್ತಿಗೆ ಜೋಡಿ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ವರದಿ ಆಗಿದೆ. ಸದ್ಯ ಈ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಲಂಡನ್ ಐಷಾರಾಮಿ ಹೋಟೆಲ್ ಒಂದರಲ್ಲಿ ಭಾರತ ಮೂಲದ ಸುರೇಂದರ್ ಮೋಹನ್ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದಾರೆ.
ನಾಗ ಚೈತನ್ಯ ಹಾಗೂ ಶೋಭಿತಾ ಅವರು ಸುರೇಂದರ್ ಮೋಹನ್ ಅವರು ಕೆಲಸ ಮಾಡುವ ಹೋಟೆಲ್ಗೆ ಆಗಮಿಸಿದ್ದರು. ಈ ವೇಳೆ ನಾಗ ಚೈತನ್ಯ ಜೊತೆ ಸುಂದರ್ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಹಿಂಭಾಗದಲ್ಲಿ ಶೋಭಿತಾ ಕೂಡ ಕಾಣಿಸಿದ್ದರು. ‘ಇಷ್ಟು ದಿನ ಡೇಟಿಂಗ್ ವಿಚಾರವನ್ನು ಅಲ್ಲಗಳೆಯುತ್ತಲೇ ಬರುತ್ತಿದ್ದ ನಾಗ ಚೈತನ್ಯ ಅವರು ಈಗ ರೆಡ್ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ’ ಎಂದು ಅಭಿಮಾನಿಗಳು ಮಾತನಾಡಿಕೊಂಡಿದ್ದರು.
ಫೋಟೋ ಹಾಕಿದ ಸ್ವಲ್ಪ ಸಮಯದ ನಂತರದಲ್ಲಿ ಅದನ್ನು ಸುರೇಂದರ್ ಡಿಲೀಟ್ ಮಾಡಿದ್ದರು. ನಾಗ ಚೈತನ್ಯ ಹಾಗೂ ಶೋಭಿತಾ ಖಡಕ್ ಆಗಿ ಹೇಳಿದ ನಂತರದಲ್ಲಿ ಅವರು ಫೋಟೋ ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ.
ಸಮಂತಾ ಹಾಗೂ ನಾಗ ಚೈತನ್ಯ ೨೦೨೧ರ ಅಕ್ಟೋಬರ್‌ನಲ್ಲಿ ವಿಚ್ಛೇದನ ಪಡೆದಿದ್ದರು.