ನಾಗ್ರೋಟದಲ್ಲಿ ಪಾಕ್ ಉಗ್ರರ ಸಂಚು ವಿಫಲ: ಪ್ರಧಾನಿ

ನವದೆಹಲಿ, ನ.20- ಜಮ್ಮು-ಕಾಶ್ಮೀರದ ನಾಗ್ರೋಟಾ ಪ್ರದೇಶದಲ್ಲಿ ಪಾಕಿಸ್ತಾನದ ಭಯೋತ್ಪಾದಕರು ಬಾರಿ ಪ್ರಮಾಣದಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ರೂಪಿಸಿದ ಸಂಚನ್ನು ಭದ್ರತಾ ಪಡೆ ಸಮರ್ಥವಾಗಿ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ‌

ಮತ್ತೊಮ್ಮೆ ದೇಶದಲ್ಲಿ 26/ ಮಾದರಿಯಲ್ಲಿ ಭಾರಿ ಪ್ರಮಾಣದಲ್ಲಿ ವಿದ್ವಂಸಕ ಕೃತ್ಯ ನಡೆಸಲು ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಉದ್ದೇಶಿಸಿತ್ತು ಭದ್ರತಾಪಡೆ ಅದನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಹೇಳಿದ್ದಾರೆ.

ಜಮ್ಮು ಜಿಲ್ಲೆಯ ನಾಗ್ರೋಟ ಪ್ರದೇಶದಲ್ಲಿ ನೆನ್ನೆ ನಾಲ್ಕು ಮಂದಿ ಭಯೋತ್ಪಾದಕರು ನಾಪತ್ತೆ ಮಾಡಿದ ಘಟನೆ ಕುರಿತು ಉನ್ನತ ಮಟ್ಟದ ಪರಿಶೀಲನೆ ಸಭೆ ನಡೆಸಿ ಅವರು ಟ್ವೀಟ್ ಮಾಡಿದ್ದಾರೆ

ಉನ್ನತಮಟ್ಟದ ಪರಿಶೀಲನ ಸಭೆಯಲ್ಲಿ ಗೃಹಸಚಿವ ಅಮಿತ್ ಶಾ ರಾಷ್ಟ್ರೀಯ ಬದ್ರತಾ ಸಲಹೆಗಾರ ಅಜಿತ್ ದೋವೆಲ್ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶಿಂಘ್ರಾಲ ಮತ್ತಿತರರು ಪಾಲ್ಗೊಂಡಿದ್ದರು.

ಭಾರತದಲ್ಲಿ ಭಾರಿ ಪ್ರಮಾಣದಲ್ಲಿ ವಿದ್ವಂಸಕ ಕೃತ್ಯ ನಡೆಸಲು ಪಾಕಿಸ್ತಾನ ಭಯೋತ್ಪಾದಕರು ಸಂಚು ರೂಪಿಸಿದ್ದರು ಅದನ್ನು ಭದ್ರತಾ ಪಡೆ ಹಿಮ್ಮೆಟ್ಟಿಸಿ ನಾಲ್ಕು ಮಂದಿ ಉಗ್ರರನ್ನ ನೆನ್ನೆ ಹೊಡೆದುರುಳಿಸಿತ್ತು.

26/11 ವರ್ಷಾಚರಣೆಯ ಸಮಯದಲ್ಲಿ ಭಾರತದಲ್ಲಿ ಭಾರಿ ಪ್ರಮಾಣದಲ್ಲಿ ಕೃತ್ಯ ನಡೆಸಲು ಉಗ್ರರು ಸಂಚು ರೂಪಿಸಿದ್ದರು ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಮಾಹಿತಿ ಹಿನ್ನಲೆಯಲ್ಲಿ ನಿನ್ನೆ ನಾಲ್ಕುಮಂದಿ ಉಗ್ರರನ್ನು ಹತ್ಯೆ ಮಾಡಲಾಗಿತ್ತು.