
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.14: ಬಿಜೆಪಿಯ ಪ್ರಭಲ ನಾಯಕ ಶ್ರೀರಾಮುಲು ಅವರನ್ನು ಸೋಲಿಸಿರುವ ಗ್ರಾಮೀಣ ಶಾಸಕ ಬಿ.ನಾಗೇಂದ್ರ. ಅವರಿಗೆ ಸಚಿವ ಸ್ಥಾನ ಸಿಗಲೇ ಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಸಂಯೋಜಕ ಅಲ್ಲಂ ಪ್ರಶಾಂತ್ ಹೇಳಿದ್ದಾರೆ.
ಅವರಿಂದು ಸಂಜೆವಾಣಿ ಜೊತೆ ಮಾತನಾಡಿ, ಬಿಜೆಪಿಯವರ ಹಣ, ಅಧಿಕಾರ ಬಲದ ಮುಂದೆ ಎದೆಗುಂದದೆ ಮಾನಸಿಕವಾಗಿ ಜರ್ಜರಿತರಾಗದೇ. ಸಮ ಚಿತ್ತದಿಂದ ಎದುರಿಸಿದ ನಾಗೇಂದ್ರ ಅವರ ಚುನಾವಣೆಯ ಕಾರ್ಯಶೈಲಿ ಮೆಚ್ಚುವಂತಹದು. ಅವರು ಸಚಿವ ಸ್ಥಾನಕ್ಕೆ ಸಮರ್ಥ ವ್ಯಕ್ತಿಯಾಗಿದ್ದಾರೆ. ಪಕ್ಷ ಇದನ್ನು ಪರಿಗಣಿಸಬೇಕಿದೆಂದಿದ್ದಾರೆ.
ಪ್ರಚಾರ ಸಮಿತಿಯಿಂದ ತಾವು ಚುನಾವಣೆಯಲ್ಲಿ ಮಾಡಿದ ಪ್ರಯತ್ನ, ಮತದಾರರ, ಕಾರ್ಯಕರ್ತರ ಸಹಕಾರದಿಂದ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರಣ ಆಗಿದೆ ಎಂದಿದ್ದಾರೆ
One attachment • Scanned by Gmail