ನಾಗೂರ : ದಲಿತರ ಮೇಲಿನ ಸಾಮಾಜಿಕ ಬಹಿಷ್ಕಾರ ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ

ವಿಜಯಪುರ :ಮಾ.31:ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಣೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ ನಾಗೂರ ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರ ಹಾಕಿರುವದನ್ನು ಖಂಡಿಸಿ ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ ಯುವ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಾದ ವಿಜಯಮಹಾಂತೇಶ ದಾನಮ್ಮನವರಿಗೆ ಮನವಿ ಸಲ್ಲಿಸಿದರು.
ಡಿಎಸ್‍ಎಸ್ ಜಿಲ್ಲಾ ಸಂಚಾಲಕರಾದ ಚಂದ್ರಕಾಂತ ಸಿಂಗೆ ಮಾತನಾಡಿ ಬಸವನ ಬಾಗೇವಾಡಿ ತಾಲೂಕಿನ ಮಣೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ನಾಗೂರÀ ಗ್ರಾಮದಲ್ಲಿ ದಲಿತ ಸಮುದಾಯಕ್ಕೆ ಸಂಬಂಧಿಸಿದಂತೆ ಯಾರಾದರೂ ತೀರಿಕೊಂಡರೆ ಗ್ರಾಮದಲ್ಲಿ ಹೋಟೇಲ್ ಹಾಗೂ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಯಾವುದೇ ಅಗತ್ಯ ವಸ್ತುಗಳು ಸಿಗದಂತೆ ಸವರ್ಣೀಯರು ದೈವಜವಾಗಿ ಅಸ್ಪಷ್ಟತೆಯನ್ನು ಚಾಚು ತಪ್ಪದೆ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಗ್ರಾಮದಲ್ಲಿ ದೇವಸ್ಥಾನಗಳಿಗೆ ಹಾಗೂ ಹೋಟೆಲ್‍ಗಳಲ್ಲಿ ಪ್ರವೇಶ ನೀಡದೆ ದಲಿತರನ್ನು ಪ್ರಾಣಿಗಳಿಗಿಂತಲೂ ಕೀಳಾಗಿ ನೋಡುತ್ತಿದ್ದಾರೆ. ಸರಕಾರಗಳು ಅಸ್ಪಶ್ಯತೆ ನಿವಾರಣೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡರು ಅಸ್ಪಷ್ಟತೆ ಇನ್ನೂ ಜೀವಂತವಾಗಿರುವದು ದುರಂತವೇ ಸರಿ, ವಿಷಯವಾಗಿ ಬಸವನ ಬಾಗೇವಾಡಿ ಠಾಣೆಗೆ ಮೌಖಿಕವಾಗಿ ತಿಳಿಸಲಾಗಿದ್ದರೂ ಕೂಡ ಯಾವುದೇ ಕ್ರಮ ಕೈಗೊಂಡಿರುವದಿಲ್ಲ. ಈ ಗ್ರಾಮದಲ್ಲಿ ದಲಿತರ ಕೆಲವೆ ಕೆಲವು ಮನೆಗಳಿದ್ದು, ನಮ್ಮ ಬದುಕು ದುಸ್ತರವಾಗಿದೆ, ನಾವು ಪ್ರತಿಭಟಿಸಲು ಹೋದಾಗ ಊರಿನಲ್ಲಿ ಕೂಲಿ ನೀಡಿದ ಹೊಲ ಮನೆಗಳಲ್ಲಿ ಕೆಲಸ ನೀಡದೆ ಸವರ್ಣೀಯರು ಕಿರುಕುಳ ನೀಡುತ್ತಿದ್ದಾರೆ.
ಮಾನ್ಯರು ಸದರಿ ಊರಿನ ಗ್ರಾಮಸ್ಥರ ಮೇಲೆ ಕಾನೂನು ರೀತಿ ಕ್ರಮ ಕೈಗೊಂಡು ನಾಗೂರ ಗ್ರಾಮದ ಎಲ್ಲ ದಲಿತ ಕುಟುಂಬಗಳಿಗೆ ರಕ್ಷಣೆ ನೀಡಿ ಸವರ್ಣೀಯರಿಂದ ನಮ್ಮ ಮೇಲಾಗುತ್ತಿರುವ ದೇರ್ವಣ್ಯವನ್ನು ಹೋಗಲಾಡಿಸಿ ಸಮಾಜದಲ್ಲಿ ನಿರ್ಭೀತಿಯಿಂದ ಹಾಗೂ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಜು ಕಂಬಾಗಿ, ಚನ್ನು ಕಟ್ಟಿಮನಿ, ಶಂಕರ ಚಲವಾದಿ, ಚಂದ್ರಶೇಖರ ನಾಲತವಾಡ, ಗಂಗಾಧರ ಆರೇರ, ಕೇಶವ ಅಣ್ಣಿಗೇರಿ, ಯಲ್ಲಪ್ಪ ಆರೇರ ಬಸಪ್ಪ ಚಲವಾದಿ, ಶಿವಪ್ಪ ನಾಲತವಾಡ, ಮಹಾದೇವ ಕಣಕಾಲ, ಶರಣಪ್ಪ ಮೇಲಿನಮನಿ, ಶರಣಪ್ಪ ಆರೇರ, ಸಂಗಮೇಶ ನಾಲತವಾಡ, ಪವಾಡೆಪ್ಪ ಆರೇರ ಮತ್ತಿರರು ಉಪಸ್ಥಿತರಿದ್ದರು.