ನಾಗೂರಾ ಸಂಪೂರ್ಣ ಲಸಿಕಾಕರಣ ಮಾಡುವ ಗುರಿ

ಬೀದರ: ಮೇ.29:ಶುಕ್ರವಾರ ನಾಗೋರಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಾದ ನಾಗೋರಾ, ಸಾತೋಳಿ, ಫೋಡಂಪಳ್ಳಿ, ಯಾಕತಪೂರ ಟಿ.ಮರ್ಜಾಪೂರ ಗ್ರಾಮದ 18 ರಿಂದ 44 ವರ್ಷದ ದುರ್ಬಲ ವರ್ಗದವರು ಮತ್ತು ಮಂಚೂಣಿ ಕಾರ್ಯಕರ್ತರಿಗೆ ಕೊವೀಡ್-19 ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಿದರು
ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಸರಿ ಸುಮಾರು 50ಕ್ಕೂ ಹೆಚ್ಚು 18-44 ವರ್ಷದ ವಯೋಮಾನದವರಿಗೆ ಗುಲಾಬಿ ಹೂವು ನೀಡುವ ಮೂಲಕ ವ್ಯಾಕ್ಸಿನ್ ನೀಡಲಾಯಿತು
ನಂತರ ಗಂಗಾದೇವಿ ಮಾತನಾಡಿ, ಸರ್ಕಾರದ ಆದೇಶದಂತೆ 18-44 ವರ್ಷ ವಯಸ್ಸಿನ ದುರ್ಬಲವರ್ಗದವರಿಗೆ ಮುಂಚುಣಿ ಕಾರ್ಯಕರ್ತರಿಗೆ ಕೋವಿಡ್-19 ತಡೆಗಟ್ಟಲು ಲಸಿಕೆ ನೀಡುವ ಕಾರ್ಯಕ್ರಮವನ್ನು ನಾಗೋರಾ ಗ್ರಾಮ ಪಂಚಾಯತಿಯನ್ನು ಮಾದರಿಯಾಗಿ ತೆಗೆದುಕೊಂಡು ಚಾಲನೆ ನೀಡಲಾಗಿದ್ದು, ಸರಕಾರದ ಈ ಅವಕಾಶವನ್ನು ಸಾರ್ವಜನಿಕರು ಉಪಯೋಗಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ನಾಗೋರಾ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಗಾಯತ್ರೀದೇವಿ ಹೊಸಮನಿ, ವೈದ್ಯಾಧಿಕಾರಿ ಡಾ|| ರಶೀದ ಅಲಿ, ತಾಲೂಕಾ ಆರೋಗ್ಯಧಿಕಾರಿ ಸಂಗಾರೆಡ್ಡಿ ಗ್ರಾಮ ಪಂಚಾಯತ ನಾಗೋರ ಅಧ್ಯಕ್ಷೆ ಪ್ರಭಾವತಿ ಪಾಟೀಲ, ಗ್ರಾಮ ಪಂಚಾಯತ ಸಿಬ್ಬಂದಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಗ್ರಾಮ ಪಂಚಾಯತ ಸದ್ಯಸ್ಯರು, ಕಂದಾಯ ಇಲಾಖೆ ಸಿಬ್ಬಂದಿಗಳು, ಎಂ.ಎಲ್.ಹೆಚ್.ಪಿ ಇಮ್ಮಾನ್‍ವೇಲ್ ಭಾವಿಕಟ್ಟಿ, ಅಂಗನವಾಡಿ ಸಿಬ್ಬಂದಿ, ಆಶಾ ಕಾರ್ಯಕರ್ತರು, ವಿ.ಆರ್.ಡಬ್ಲೂ. ರಮೇಶ, ಕರೊನಾ ವಾರಿಯರ್ಸ್ ಉದಯಕುಮಾರ. ಹಾಗೂ ನಾಗೋರಾ ಡೆವಲಪರ್ಸ್ ಟೀಮ್, ಗ್ರಾಮಸ್ಥರು ಭಾಗಿಯಾಗಿದ್ದರು.