
ಈಶಾನ್ಯ ರಾಜ್ಯಗಳ ಫಲಿತಾಂಶ
ನವದೆಹಲಿ,ಮಾ.೨:ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ತ್ರಿಪುರಾ ಮತ್ತು ಮೇಘಾಲಯ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿದ್ದು, ಮೇಘಾಲಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿದ್ದು, ಹಾಲಿ ಮುಖ್ಯಮಂತ್ರಿ ಕಾರ್ನಾಟ್ ಸನ್ಮಾ ನೇತೃತ್ವದ ಎನ್‌ಪಿಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ.
ತ್ರಿಪುರಾದಲ್ಲಿ ಸತತ ೨ನೇ ಬಾರಿಗೆ ಬಿಜೆಪಿ ಸರ್ಕಾರ ರಚಿಸುವತ್ತ ದಾಪುಗಾಲು ಹಾಕಿದ್ದು, ನಾಗಾಲ್ಯಾಂಡ್‌ನಲ್ಲಿ ಮೈತ್ರಿ ಪಕ್ಷದೊಂದಿಗೆ ಅಧಿಕಾರದ ಗದ್ದುಗೆ ಏರಲಿದೆ. ಮೇಘಾಲಯದಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಬಂದಿಲ್ಲವಾದರೂ ಕಳೆದ ಬಾರಿಗಿಂತ ಬಿಜೆಪಿ ಹೆಚ್ಚಿನ ಸ್ಥಾನ ಪಡೆದಿದೆ.ತ್ರಿಪುರಾದ ೬೦ ಕ್ಷೇತ್ರಗಳ ಪೈಕಿ ಬಿಜೆಪಿ ಮೈತ್ರಿಕೂಟ ೩೪ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ತಿಪ್ರಾಮೋತಾ ಪಕ್ಷ ೧೧ ಸ್ಥಾನಗಳಲ್ಲಿ, ಸಿಪಿಎಂ ಮತ್ತು ಕಾಂಗ್ರೆಸ್ ಮೈತ್ರಿಕೂಟ ೧೫ ಕ್ಷೇತ್ರಗಳಲ್ಲಿ ಹಾಗೂ ಇತರರು ೧ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.
ನಾಗಾಲ್ಯಾಂಡ್‌ನ ವಿಧಾನಸಭೆಯ ೬೦ ಕ್ಷೇತ್ರಗಳ ಪೈಕಿ ೫೯ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಬಿಜೆಪಿ ಮತ್ತು
ಎನ್‌ಡಿಪಿಪಿ ಮೈತ್ರಿಕೂಟದ ೩೯ ಕ್ಷೇತ್ರಗಳಲ್ಲಿ, ಎನ್‌ಪಿಎಫ್ ೩, ಇತರರು ೧೮ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಮೇಘಾಲಯದ ೬೦ ಕ್ಷೇತ್ರಗಳ ಪೈಕಿ ಎನ್‌ಪಿಪಿ ೨೪ ಕ್ಷೇತ್ರಗಳಲ್ಲಿ, ಟಿಎಂಸಿ ೫ ಕ್ಷೇತ್ರಗಳಲ್ಲಿ, ಬಿಜೆಪಿ ೩ ಕಡೆ, ಕಾಂಗ್ರೆಸ್ ೪ ಕಡೆ, ಇತರರು ೧೨ ಕಡೆ, ಯುಡಿಪಿ ೧೧ ಕ್ಷೇತ್ರಗಳಲ್ಲಿ ಮುನ್ನಡೆದಿದೆ.ತ್ರಿಪುರಾ ವಿಧಾನಸಭೆಗೆ ಫೆ. ೬ ರಂದು, ನಾಗಾಲ್ಯಾಂಡ್ ಮತ್ತು ಮೇಘಾಲಯ ವಿಧಾನಸಭಾ ಕ್ಷೇತ್ರಗಳಲ್ಲಿ ಫೆ. ೨೭ ರಂದು ಚುನಾವಣೆ ನಡೆದಿತ್ತು.ತ್ರಿಪುರಾದಲ್ಲಿ ಬಿಜೆಪಿ ಮತ್ತು ಐಪಿಎಫ್‌ಟಿ ಮೈತ್ರಿಕೂಟ ಸರ್ಕಾರ ಅಸ್ಥಿತ್ವದಲ್ಲಿದ್ದು, ಬಿಜೆಪಿಯ ಮಾಣಿಕ್ ಶಾ ಮುಖ್ಯಮಂತ್ರಿಯಾಗಿದ್ದಾರೆ. ಇಲ್ಲಿ ಮತ್ತೆ ಬಿಜೆಪಿ ಮೈತ್ರಿಕೂಟ ಅಧಿಕಾರದ ಗದ್ದುಗೆ ಹಿಡಿಯಲು ಪೈಪೋಟಿ ನಡೆಸಿದ್ದು, ತ್ರಿಪುರಾ ರಾಜಮನೆತನಕ್ಕೆ ಸೇರಿದ ಪ್ರದ್ಯೋತ್ ಮಾಣಿಕ್ಯ ದೇಬಬರ್ಮಾ ನೇತೃತ್ವದ ತಿಪ್ರಮೋತ ಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್ ಹಾಗೂ ಎಡಪಕ್ಷಗಳ ಮೈತ್ರಿಕೂಟಕ್ಕೆ ತೀವ್ರ ಪೈಪೋಟಿ ನೀಡಿದ್ದು, ೧೨ ಕ್ಷೇತ್ರಗಳಲ್ಲಿ ಮುನ್ನಡೆಯಲಿದ್ದು, ಕಾಂಗ್ರೆಸ್ ಎಡಪಕ್ಷಗಳ ಮೈತ್ರಿಕೂಟ ೧೭ ಕ್ಷೇತ್ರಗಳಲ್ಲಿ, ಬಿಜೆಪಿ ಮತ್ತು ಐಪಿಎಫ್‌ಟಿ ಮೈತ್ರಿಕೂಟ ೨೬ ಕ್ಷೇತ್ರಗಳಲ್ಲಿ ಮುನ್ನಡೆಯಲಿದೆ.
ಮೇಘಾಲಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆಗಳಿದ್ದು, ಹಾಲಿ ಮುಖ್ಯಮಂತ್ರಿ ಕಾರ್ನಾಡ್ ಕೆ. ಸನ್ಮಾ ಅವರ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಪ್ರಬಲ ಪೈಪೋಟಿ ನೀಡಿದೆ. ಮೇಘಾಲಯದಲ್ಲಿ ಎನ್‌ಪಿಪಿ ಮುಖ್ಯಸ್ಥ ಕಾರ್ನಾಡ್ ಕೆ. ಸನ್ಮಾ ಅವರು ಸಣ್ಣಪುಟ್ಟ ಪಕ್ಷಗಳನ್ನು ಒಟ್ಟುಗೂಡಿಸಿ ಎಂಡಿಎ ನೇತೃತ್ವದಲ್ಲಿ ಸರ್ಕಾರ ರಚಿಸಿದ್ದರು. ಬಿಜೆಪಿ ಈ ಪಕ್ಷದ ಪಾಲುದಾರ ಪಕ್ಷವಾಗಿತ್ತು. ಆದರೆ, ಈ ಚುನಾವಣೆಯಲ್ಲಿ ಎಂಡಿಎ ಒಕ್ಕೂಟದಲ್ಲಿರುವ ಬಿಜೆಪಿ, ಎನ್‌ಪಿಪಿ ಸೇರಿದಂತೆ ಎಲ್ಲ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧೆ ಮಾಡಿವೆ.
ಬಿಗಿ ಭದ್ರತೆ
ನಾಗಾಲ್ಯಾಂಡ್‌ನ ರಾಜಧಾನಿ ಕೊಹಿಮಾದಲ್ಲಿ, ತ್ರಿಪುರಾದ ರಾಜಧಾನಿ ಅಗರ್ತಲಾದಲ್ಲಿ, ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಲ್ಲಿ ಇಂದು ಬೆಳಿಗ್ಗೆ ೮ ಗಂಟೆಯಿಂದಲೇ ಬಿಗಿ ಭದ್ರತೆಯಲ್ಲಿ ಮತ ಎಣಿಕೆ ನಡೆದಿದೆ.
ಪಕ್ಷಗಳ ಬಲಾಬಲ
ತ್ರಿಪುರಾ- ಒಟ್ಟು ೬೦ ಕ್ಷೇತ್ರ
ಬಿಜೆಪಿ ಮೈತ್ರಿಕೂಟ -೩೪
ಎಡಪಕ್ಷ ಮತ್ತು ಕಾಂಗ್ರೆಸ್-೧೫
ತಿಪ್ರಮೋಥ -೧೧
ಇತರೆ -೧
ನಾಗಾಲ್ಯಾಂಡ್ – ಒಟ್ಟು ೬೦
- ಬಿಜೆಪಿ -ಎನ್‌ಡಿಪಿಪಿ ಮೈತ್ರಿಕೂಟ- ೩೯
- ಎನ್‌ಪಿಎಫ್ ೩
- ಕಾಂಗ್ರೆಸ್ -೦
- ಇತರರು – ೧೮
ಮೇಘಾಲಯ- ೬೦ - ಎನ್ ಪಿಪಿ -೨೪
- ಟಿಎಂಸಿ – ೫
- ಬಿಜೆಪಿ -೩
- ಕಾಂಗ್ರೆಸ್ – ೪
- ಯುಡಿಪಿ-೧೧
- ಇತರೆ -೧೨