ನಾಗಾಯಿದಾಲಿ ಕೆರೆ ಬಿರುಕು: ದುರಸ್ಥಿಗೆ ತುರ್ತು ಕ್ರಮ

ಚಿಂಚೋಳಿ,ಆ.4- ತಾಲೂಕಿನ ನಾಗಾಇದ್ದಾಯಿ ಗ್ರಾಮದ ಕೆರೆ ಆಣೆಕಟ್ಟು ಬಿರುಕುಬಿಟ್ಟ ಪ್ರದೇಶಕ್ಕೆ ನಾಗಾಇದ್ದಾಯಿ ಗ್ರಾಮ ಪಂಚಾಯತ ಅಧ್ಯಕ್ಷರಾದ ರಾಧಮ್ಮ ರಾಜಕುಮಾರ, ಪಂಚಾಯತ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ಒಳ್ಳೆಯ ಗುಣಮಟ್ಟದ ಕಾಮಗಾರಿ ಮಾಡಿದ್ದಲ್ಲಿ ಈ ಗತಿ ಬರುತ್ತಿರಲಿಲ್ಲ ಈ ಹಿಂದೆ ಸಣ್ಣ ನೀರಾವರಿ ಇಲಾಖೆಯಿಂದ ರೂ: 4.32 ಕೋಟಿ ಅನುದಾನವನ್ನು ಈ ಕೆರೆಯ ಅಭಿವೃದ್ಧಿಗೆ ಖರ್ಚು ಮಾಡಲಾಗಿದ್ದು, ಇದರ ಗುತ್ತೇದಾರ ಕಳಪೆ ಕಾಮಗಾರಿ ಮತ್ತು ಬೇಜವಾಬ್ದಾರಿತನದಿಂದ ಮತ್ತೆ ಕೆರೆ ಅಣೆಕಟ್ಟು ಬಿರುಕುಗೊಂಡ ವಿಷಯನ್ನು ಶಾಸಕರಾದ ಡಾ: ಅವಿನಾಶ ಜಾಧವ ರವರಿಗೆ,ತಿಳಿಸಲಾಗಿ ಎಂದ ಅವರು, ಶಾಸಕರು ಕೂಡಲೆ ಈ ಸ್ಥಳಕ್ಕೆ ದಿನಾಂಕ 01-08-2022 ರಂದು ಕೆರೆಗೆ ಭೇಟಿ ನೀಡಿ ಇಲ್ಲಿನ ಸ್ಥಿತಿಗತಿಯನ್ನು ವೀಕ್ಷಣೆ
ಮಾಡಿ, ಎಕ್ಸಪೆÇೀರ್ಟ ಕಮೀಟಿ ಕರೆಯಿಸಿ ವರದಿ ಪಡೆದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಕೆರೆಯ ನೀರು ಖಾಲಿ ಮಾಡಿಸಿ ದುರಸ್ಥಿ ಕಾರ್ಯ ಪ್ರಾರಂಭಿಸಿದ್ದಾರೆ.
ಸಾರ್ವಜನಿಕರ ಮುಂಜಾಗೃತ ಕ್ರಮಕ್ಕಾಗಿ ನಾಗಾಇದ್ದಾಯಿ ಗ್ರಾಮ ಪಂಚಾಯತ ಕಾರ್ಯಾಲಯದಿಂದ ಡೊಂಗುರ ಸಾರಲಾಗಿದೆ. ಆದ ಕಾರಣ ಗ್ರಾಮದ ಸಾರ್ವಜನಿಕರು ಭಯ ಪಡುವಂತಹ ಅವಶ್ಯಕತೆ ಇರುವುದಿಲ್ಲ ಎಂದು ನಾಗಾಇದ್ದಾಯಿ, ಗ್ರಾಮ ಪಂಚಾಯತ ಅಧ್ಯಕ್ಷರಾದ ರಾಧಮ್ಮ ರಾಜಕುಮಾರ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.