ನಾಗಸ್ವರ ವಾದಕ ಭೋಜರಾಜ ಶೇರಿಗಾರ್ ನಿಧನ

ಮೂಡುಬಿದಿರೆ, ಎ.೧೪- ಅಶ್ವತ್ಥಪುರ ನಿವಾಸಿ ಖ್ಯಾತ ನಾಗಸ್ವರ ವಾದಕ ಭೋಜರಾಜ ಶೇರಿಗಾರ್ (೭೮) ಸೋಮವಾರ ನಿಧನರಾದರು.

ಅವರಿಗೆ ಪತ್ನಿ ಮೂವರು ಪುತ್ರರು, ಪುತ್ರಿ ಇದ್ದಾರೆ. ತನ್ನ ೧೫ನೇ ವಯಸ್ಸಿನಲ್ಲಿ ಬೆಂಗಳೂರಿನ ಕೃಷ್ಣಮೂರ್ತಿ ಅಯ್ಯಂಪಟ್ಟಿ ಅವರಲ್ಲಿ ಸಂಗೀತ ಅಭ್ಯಾಸ ಕಲಿತು ಕೊಳಲು ನುಡಿಸಲು ಪ್ರಾರಂಭಿಸಿದ ಅವರು ಮುಂದೆ ತಂಜಾವೂರಿನ ಸಭಾಪತಿ ಪಿಳೈ ಅವರಲ್ಲಿ ನಾಗಸ್ವರ ವಾದನ ಕಲಿತು ವಿದ್ವಾನ್‌ರಾದರು.

ನಾಡಿನೆಲ್ಲೆಡೆ ನಾಗಸ್ವರ ಕಾರ್ಯಕ್ರಮ ನೀಡಿದ ಅವರು ಮಂಗಳೂರು, ಮೈಸೂರು, ಮದ್ರಾಸ್ ಆಕಾಶವಾಣಿಯಲ್ಲಿ ಎ ಗ್ರೇಡ್ ಕಲಾವಿದರಾಗಿ, ದೂರದರ್ಶನ ಚಂದನವಾಹಿನಿಯಲ್ಲಿ ಕಾರ್ಯಕ್ರಮ ನೀಡಿ ಪ್ರಸಿದ್ಧರಾಗಿದ್ದರು.

೧೯೭೦ ದಶಕದಲ್ಲಿ ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲ್‌ನಾಥ್ ಇವರ ಬಳಿ ಸಂಗೀತಾಭ್ಯಾಸ ನಡೆಸಿದ್ದರು. ಹಲವು ಸಂಘ-ಸಂಸ್ಥೆಗಳಿಂದ ಸನ್ಮಾನಿತರಾಗಿದ್ದರು.