ನಾಗವಳ್ಳಿ ಪಿಎಂಶ್ರೀ ಸರ್ಕಾರಿ ಶಾಲೆಯಿಂದ ಮಕ್ಕಳಿಗೆ ಅದ್ದೂರಿಸ್ವಾಗತ

ಸಂಜೆವಾಣಿ ವಾರ್ತೆ
ಚಾಮರಾಜನಗರ,ಜೂ.01-ತಾಲೂಕಿನ ನಾಗವಳ್ಳಿಯ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳನ್ನು ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.
ಪ್ರಸಕ್ತ 2024-25ನೇ ಸಾಲಿನ ಶಾಲೆಯ ಪ್ರಾರಂಭೋತ್ಸವದ ಅಂಗವಾಗಿ ಶಾಲೆಯ ಶಿಕ್ಷಕ ವೃಂದ ಶಾಲೆಯನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಶಾಲೆಯಿಂದ ಮಕ್ಕಳನ್ನು ಮೆರವಣಿಗೆ ಮೂಲಕ ಪ್ರಮುಖ ಬೀದಿಗಳಿಗೆ ತೆರಳಿ ನಂತರ ಮಕ್ಕಳಿಗೆ ಸಿಹಿ ಹಾಗೂ ಹೂ ನೀಡಿ ಸ್ವಾಗತಿಸಿದರು.
ಇದೇ ವೇಳೆ ಉಚಿತವಾಗಿ ಮಕ್ಕಳಿಗೆ ಎರಡುಜೊತೆ ಸಮವಸ್ತø ಹಾಗೂ ಪಠ್ಯ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೆಶಕ ರಾಮಚಂದ್ರರಾಜೇ ಅರಸ್ ಅವರು ಶಾಲೆಯ ವಾತಾವರಣ, ಹಾಗೂ ಶುಚಿತ್ವ, ಮೂಲ ಸೌಕರ್ಯಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ಎಂ. ಶಾಂತಿಅವರು ಮಾತನಾಡಿ 2022-23 ನೇ ಸಾಲಿನಲ್ಲಿ ಈ ಶಾಲೆಯು ಪಿಎಂಶ್ರೀ ಯೋಜನೆಯಡಿಆಯ್ಕೆಯಾಗಿದ್ದು ಈ ವರ್ಷದಿಂದ ಎಲ್‍ಕೆಜಿ ತರಗತಿ ಆರಂಭಗೊಂಡಿದ್ದುಇದರ ಸದುಪಯೋಗ ಪಡೆದುಕೊಳ್ಳಬೇಕು ಅಲ್ಲದೇ ಮೂಲಭೂತ ಸೌಕರ್ಯ ಈ ಶಾಲೆ ಹೊಂದಿದ್ದು ಹಸಿರು ಶಾಲೆ ಎಂಬ ಕೀರ್ತಿ ಪಡೆದಿದೆಎಂದು ತಿಳಿಸಿದ ಅವರು ಸರ್ಕಾರಿ ಶಾಲೆಯಲ್ಲಿಗುಣ ಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು ಪೋಷಕರು ಶಾಲೆಯಅಭಿವೃದ್ದಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿಡಯಟ್ ಹಿರಿಯ ಉಪನ್ಯಾಸಕಿಕಾ ತ್ಯಾಯಿಣಿ ಹೆಚ್. ವಿಷಯ ಸಂಯೋಜಕರಾದ ಸಿದ್ದರಾಜು, ಬಿಆರ್‍ಪಿ ರಮೇಶ್, ಸಿಆರ್‍ಪಿಗಳಾದ ಸೋಮಣ್ಣ, ಕಿಟ್ಟು, ಶಿಕ್ಷಕರಾದ ರಾಜಮ್ಮ, ಗೀತಾಎಸ್, ರಾಜೇಶ್ವರೀ, ಲೀಲಾವತಿ, ಕುಮಾರ್ ಸಿ, ಸೇರಿದಂತೆಅಡುಗೆ ಸಹಾಯಕರು ಪೋಷಕರುಇದ್ದರು.