
ಬೀದರ್: ಫೆ.22:ಬೀದರ ದಕ್ಷಿಣ ಕ್ಷೇತ್ರದ ರಂಜೊಳ ಖೇಣಿ ಗ್ರಾಮದಲ್ಲಿ ಶಿವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಶ್ರೀ ನಾಗಲಿಂಗೆಶ್ವರ ಜಾತ್ರಾ ಮಹೋತ್ಸವ ಹಾಗು ರಥೋತ್ಸವ ಕಾರ್ಯಕ್ರಮದಲ್ಲಿ ಬೀದರ ದಕ್ಷಿಣ ಕ್ಷೇತ್ರದ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಅಶೋಕ ಖೇಣಿ ರವರು ಭಾಗವಹಿಸಿ ದರ್ಶನ ಪಡೆದು ವೇದಿಕೆ ಉದ್ದೇಶಿಸಿ ಮಾತನಾಡಿದರು
ಬಳಿಕ ಮಾತನಾಡಿದ ಮಾನ್ಯ ಅಶೋಕ ಖೇಣಿ ರವರು ನಾಗಲಿಂಗೆಶ್ವರ ದೇವರ ಮಹಿಮೆ ಅಪಾರ ನಾನು ಚಿಕ್ಕ ವಯಸ್ಸಿನಲ್ಲಿ ನಮ್ಮ ತಂದೆಯವರ ಜೊತೆ ಜೊತೆ ದೇವಸ್ಥಾನಕ್ಕೆ ಬರುತ್ತಿದ್ದೆ ದೇವಸ್ಥಾನ ಸುತ್ತ ಮುತ್ತ ನೀರು ಸುಂದರ ಅರಣ್ಯ ಇದೆ ಎಂದು ನೆನಪುಗಳನ್ನು ಮೆಲುಕು ಹಾಕಿದರು ನನ್ನ ಅವಧಿಯಲ್ಲಿ ದೇವಸ್ಥಾನಕ್ಕೆ ರಸ್ತೆ, ವಿದ್ಯುತ್, ಸಮುದಾಯ ಭವನ ನಿರ್ಮಾಣ ಮಾಡಿದ್ದೇನೆ ಎಂದು ಹೇಳಿದರು.
ಹಿರಿಯ ಮುಖಂಡರಾದ ಬಸವರಾಜ ಪಾಟೀಲ ಮಾತನಾಡಿ ಮಾನ್ಯ ಅಶೋಕ ಖೇಣಿ ರವರು ನಮ್ಮ ಗ್ರಾಮಕ್ಕೆ
ಹಾಗು ದಕ್ಷಿಣ ಕ್ಷೇತ್ರಕ್ಕೆ ರಸ್ತೆ, ನೀರು, ಭವನಗಳು, ವಿದ್ಯುತ್, ಇನ್ನಿತರ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಅವರಿಗೆ ಮುಂದಿನ ದಿನಗಳಲ್ಲಿ ಮತ್ತೂಮ್ಮೆ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆ ಮಾಡಿ ರಂಜೊಳ ಖೇಣಿ ಗ್ರಾಮದ ಅಭಿವೃದ್ಧಿ ನೋಡೋಣ ಎಂದು ಹೇಳಿದರು
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾದ ಚಂದ್ರಶೇಖರ್ ಚನಶಟ್ಟಿ, ಕರೀಮ ಸಾಬ ಕಮಠಾಣ, ಗ್ರಾಮ ಪಂಚಾಯತ ಅಧ್ಯಕ್ಷರಾದ ಬದ್ರೇಶ ಖೇಣಿ
ಮುಖಂಡರಾದ ಬಸವರಾಜ ಪಾಟೀಲ,ವೈಜಿನಾಥ ನಾಟಿಕಾರ, ರಾಜಕುಮಾರ ಗಿರಿಮಲ್, ನಂದಕುಮಾರ್ ಪಾಟೀಲ,
ದೀಪರಾಜ ಗಿರಮಲ್,ರಾಜಕುಮಾರ ಚನಮಲ್, ದತ್ತು ಚನಮಲ್,ಸಂಗಪ್ಪ ಮಜಗೆ, ಮಲ್ಲಿಕಾರ್ಜುನ ಬಂಮಾ, ಶಿವಕುಮಾರ್ ಹಜ್ಜರಗಿ, ಪವನ ಧೂಮನಸೂರ, ಕಿಸಾನ್ ಸೇಲ್ ಅಧ್ಯಕ್ಷರಾದ ಸಂತೋಷ ಪಾಟೀಲ, ಕಿಸಾನ್ ಸೇಲ್ ರಾಜ್ಯ ಕಾರ್ಯದರ್ಶಿಯಾದ ಉದಯಕುಮಾರ್ ಚಟನಳ್ಳಿ, ಬ್ಲಾಕ್ ಕಾಂಗ್ರೆಸ್ ಕಮಿಟಿಯ ಖಂಜಾಚಿ ರಾಜಕುಮಾರ್ ಮಡಿಕಿ, ಸೇರಿ ಗ್ರಾಮದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಾಜರಿದ್ದರು.