ನಾಗರ ವಿಗ್ರಹಕ್ಕೆ ಹಾಲೆರೆದ ಮಹಿಳೆಯರು, ವಿವಿಧೆಡೆ ವಿಶೇಷ ಪೂಜೆ

?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಸೈದಾಪುರ:ಆ.23:ಪಟ್ಟಣದಲ್ಲಿ ಮಹಿಳೆಯರು, ಮಕ್ಕಳು ಹೊಸ ಬಟ್ಟೆ ಧರಿಸಿ ಬೆಳಗ್ಗೆಯಿಂದಲೇ ವಿಶ್ವನಾಥ ಮಂದಿರದಲ್ಲಿನ ನಾಗರ ವಿಗ್ರಹಕ್ಕೆ ಕೊಬ್ಬರಿಯ ಬಟ್ಟಲಿನಿಂದ ಹಾಲೆರೆದು ನೈವೇದ್ಯ ಸಮರ್ಪಿಸಿ, ಪೂಜೆ ಸಲ್ಲಿಸಿದ ಶ್ರದ್ಧಾಭಕ್ತಿಯಿಂದ ನಾಗರ ಪಂಚಮಿಯನ್ನು ಆಚರಿಸಿದರು. ಮಕ್ಕಳು ಕೊಬ್ಬರಿಯ ಹಾಗೂ ಜೋಕಾಲಿ ಕಟ್ಟಿ ಆಡುವ ಮೂಲಕ ಸಂಭ್ರಮಿಸಿದರು.
ಚೇಳಿನ ಜಾತ್ರೆ ತೆರಳಿದ ಸೈದಾಪುರ ಜನ: ಪ್ರತಿ ವರ್ಷದ ಶ್ರಾವಣ ಮಾಸದ ನಾಗರ ಪಂಚಮಿ ದಿನದಂದು ಜರುಗುವ ಕಂದಕೂರು ಗ್ರಾಮದ ಕೊಂಡಮ್ಮಾದೇವಿ ಜಾತ್ರೆಯು ಚೇಳಿನ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿದೆ. ಇದಕ್ಕೆ ಪಟ್ಟಣ ಬಹುಪಾಲು ಜನ ತೆರಳಿದರು. ಅಲ್ಲಿ ದೇವಸ್ಥಾನದ ಸುತ್ತ ಕಲ್ಲುಗಳ ಸಂದಿನಲ್ಲಿ ಅಡಗಿರುವ ಚೇಳುಗಳನ್ನು ಹಿರಿ-ಕಿರಿಯರೆಲ್ಲರೂ ನಿರ್ಭಯವಾಗಿ ಮೈ-ಮೇಲೆ ಹರಡಿಕೊಳ್ಳವ ಮೂಲಕ ಸಂಭ್ರಮಿಸಿದರು.