
ಅರಕೇರಾ,ಆ.೨೨-
ಅರಕೇರಾ ಸಮೀಪದ ಜುಟಮರಡಿಯಲ್ಲಿರುವ ಉಟಕನೂರು ತಾತನ ದೇವಸ್ಥಾನದ ಬಳಿಯ ನಾಗರ ಮೂರ್ತಿಗೆ ಮಹಿಳೆಯರು ಸೋಮವಾರ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿ ಹಾಲು ಎರೆಯುವ ಮೂಲಕ ಸಂಭ್ರಮದಿಂದ ಪಂಚಮಿ ಹಬ್ಬವನ್ನು ಆಚರಣೆ ಮಾಡಿದರು.
ಪಟ್ಟಣದ ಗುಡ್ಡದಲ್ಲಿರುವ ಏಳು ಅಡಿ ಸರ್ಪ ಸೇರಿ ಸುತ್ತಲಿನ ಹಳ್ಳಿಗಳಲ್ಲಿ ನಾಗರ ಮೂರ್ತಿಗಳಿಗೆ ವಿಶೇಷ ಪೂಜೆ, ಹಾಲು ಎರೆಯುವ ಮೂಲಕ ವಿಶೇಷವಾಗಿ ಹಬ್ಬವನ್ನು ಆಚರಿಸಿದರು.