ನಾಗರ ಪಂಚಮಿ: ಹುತ್ತಕ್ಕೆ ಹಾಲೆರೆದ ಮಹಿಳೆಯರು

ಸಿರವಾರ,ಆ.೨೧-
ತಾಲೂಕಿನ ನಾನಾ ಕಡೆ ನಾಗರ ಪಂಚಮಿ ಹಬ್ಬದ ನಿಮಿತ್ತ ಮಹಿಳೆಯರು ನಾಗರ ಮೂರ್ತಿ, ಹುತ್ತಕ್ಕೆ ಹಾಲೆರೆದು ಸಂಭ್ರಮದಿಂದ ಸೋಮವಾರ ಹಬ್ಬ ಆಚರಿಸಿದರು.
ನಾಗರ ಪಂಚಮಿಯ ದಿನವಾದ ಸೋಮವಾರ ಪಟ್ಟಣದ ೧೧ನೇ ವಾರ್ಡ್‌ನ ಶ್ರೀತಾಯಮ್ಮ ದೇವಿ ದೇವಸ್ಥಾನದಲ್ಲಿರುವ ನಾಗರ ಮೂರ್ತಿ ಹಾಗೂ ಹುತ್ತಕ್ಕೆ ವಾರ್ಡ್‌ನ ನಿವಾಸಿ ಮಹಿಳೆಯರು ವಿವಿಧ ಬಗೆಯ ಸಿಹಿ ಖಾದ್ಯಗಳನ್ನು, ಎಳ್ಳು ಮತ್ತು ಶೇಂಗಾ ಹೋಳಿಗೆ, ಉಂಡೆಗಳನ್ನು (ಲಡ್ಡು) ನೈವೇದ್ಯ ಮಾಡಿ ಪೂಜಿಸಿದರು.
ಹಿಂದೂ ಧರ್ಮಗ್ರಂಥಗಳಲ್ಲಿ ಹಾವನ್ನು ದೇವತೆ ಎಂದು ಪರಿಗಣಿಸಲಾಗುತ್ತದೆ. ಇಂದು ಅನೇಕ ಕಾರಣಗಳಿಂದಾಗಿ ನಾಗರದೇವತೆಯನ್ನು ಪೂಜಿಸಲಾಗುತ್ತೆ. ಈ ದಿನ ಹಾವಿಗೆ ಹಾಲೆರೆದು ಪೂಜಿಸಿ ಸಕಲ ಇಷ್ಟಾರ್ಥಗಳು ಪ್ರಾಪ್ತಿಯಾಗುವಂತೆ ನಾಗದೇವನನ್ನ ಬೇಡುವುದು ವಾಡಿಕೆ.
ಈ ವೇಳೆ ವಾರ್ಡ್‌ನ ಮಹಿಳೆಯರಾದ ಚಂದ್ರಕಲಾ ಲಕ್ಕಂದಿನ್ನಿ, ಅಮರಮ್ಮ ಕುರುಕುಂದಿ, ಅನ್ನಪೂರ್ಣ ಯರಮರಸ್, ಶಾಂತಾ ಜಕ್ಕಲದಿನ್ನಿ, ಕಾವ್ಯಾ ಸೇರಿದಂತೆ ಇತರರು ಇದ್ದರು.