ನಾಗರ ಪಂಚಮಿ ಹಬ್ಬದ ನಿಮಿತ್ಯ ವಿಶೇಷ ಪೂಜೆ. ಅನ್ನ ಸಂತರ್ಪಣೆ

ಅಥಣಿ :ಆ.22: ಪಟ್ಟಣದ ಶಿವಯೋಗಿ ವೃತ್ತದಲ್ಲಿರುವ ನಾಗದೇವರ ಮಂದಿರದಲ್ಲಿ ನಾಗರ ಪಂಚಮಿ ನಿಮಿತ್ತ ವಿಶೇಷ ಪೂಜೆ, ಅಭಿಷೇಕ, ಮಹಿಳೆಯರಿಂದ ನಾಗದೇವರಿಗೆ ನೈವೇದ್ಯ ಅರ್ಪಿಸಿ, ಹಾಲೇರುವ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. ನಾಗದೇವರ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಸಹಸ್ರ ಮುತ್ತೈದೆಯರ ಉಡಿ ತುಂಬ ಕಾರ್ಯಕ್ರಮ ಹಾಗೂ ಅನ್ನಸಂತ್ರಪಣೆ ಕಾರ್ಯಕ್ರಮ ಜರುಗಿತು. ಅಥಣಿ ಪಟ್ಟಣದ ಸಾವಿರಾರು ಸದ್ಭಕ್ತರು ನಾಗದೇವರ ದರ್ಶನ ಪಡೆದು ಮಹಾಪ್ರಸಾದ ಸ್ವೀಕರಿಸಿದರು. ಸಾಯಂಕಾಲ ಮನೋರಂಜನೆಗಾಗಿ ಕಂಕನವಾಡಿಯ ಸದಾಶಿವ ಗಾಯನ ಸಂಘ ಮತ್ತು ಹುನ್ನೂರ ಗ್ರಾಮದ ದುರ್ಗಾದೇವಿ ಗಾಯನ ಸಂಘದವರಿಂದ ಚೌಡಕಿ ಪದಗಳು ಜರುಗಿದವು.