ನಾಗರ ಪಂಚಮಿ ಹಬ್ಬದ ನಿಮಿತ್ತ ಮಹಿಳೆಯರಿಗಾಗಿ ಮೆಹಂದಿ ಸ್ಪರ್ಧೆ

ಕಲಬುರಗಿ: ಆ.1:ಗೋದುತಾಯಿ ಬಡಾವಣೆಯಲ್ಲಿರುವ ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾನುವಾರ ಮಹಿಳೆಯರಿಗಾಗಿ ನಾಗರ ಪಂಚಮಿ ಹಬ್ಬದ ಮುನ್ನಾದಿನ ಶಾಲಾ ವಿದ್ಯಾರ್ಥಿನಿಯರಿಗೆ ಹಾಗೂ ವಿದ್ಯಾರ್ಥಿನಿಯರ ತಾಯಂದಿರರಿಗೆ (ಪಾಲಕರಿಗಾಗಿ) ಶಾಲಾ ಆವರಣದಲ್ಲಿ ಮೆಹಂದಿ ಸ್ಪರ್ಧೆ ಏರ್ಪಡಿಸಲಾಗಿತ್ತು.

ಬಹು ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಹಾಗೂ ತಾಯಂದಿರರು (ಪಾಲಕರು) ಬಹಳ ಉತ್ಸುಕತೆಯಿಂದ ಮೆಹಂದಿ ಸ್ಪರ್ಧೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಈ ಸ್ಪರ್ಧೆಯ ಮುಖ್ಯ ಉದ್ದೇಶ ಭಾರತೀಯ ಸಂಸ್ಕøತಿಯಲ್ಲಿ ಅದು ಶ್ರಾವಣ ಮಾಸದ ಪ್ರಾರಂಭದಲ್ಲಿ ಮೆಹಂದಿ ಹಾಕಿಕೊಳ್ಳುವುದು ಪರಂಪರೆ ಇದೆ ಹಾಗೂ ಶುಭ ಸಂಕೇತವಾಗಿದೆ. ಮೆಹಂದಿಯಲ್ಲಿ ಔಷಧೀಯ ಗುಣವಿದ್ದು ಅನೇಕ ರೋಗಗಳಿಗೆ ರಾಮಭಾಣವಾಗಿದೆ ಹಾಗೂ ಮೆಹಂದಿಯು ಮಹಿಳೆಯರ ಅಲಂಕಾರಕ್ಕಾಗಿ ಹಾಗೂ ಸೌಂಧರ್ಯವರ್ಧಕಗಳಲ್ಲಿ ಬಳಸಲಾಗುತ್ತದೆ. ಮೆಹಂದಿಯು ಪ್ರಕೃತಿಯಲ್ಲಿ ಸಿಗುವ ನೈಸರ್ಗಿಕ ವರದಾನವಾಗಿದೆ.

ಮಹಿಳೆಯರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಉತ್ತಮ ಮೆಹಂದಿ ಬಿಡಿಸಿದ ಮಹಿಳಾ ವಿಜೇತರಿಗೆ ಸ್ಥಳದಲ್ಲಿಯೇ ಪ್ರಥಮ, ದ್ವೀತಿಯ, ಹಾಗೂ ತೃತೀಯ ಬಹುಮಾನ ನೀಡಲಾಯಿತು.

ಮೆಹಂದಿ ಸ್ಪರ್ಧೆಯನ್ನು ಪ್ರಭಾರಿ ಮುಖ್ಯೋಪಾಧ್ಯಾಯನಿಯರಾದ ಮನಿಷಾ ಜೋಶಿ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಜರುಗಿತು. ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶಿವಪುತ್ರಪ್ಪಾ ಡೆಂಕಿ ಅವರು ಶ್ರಾವಣ ಮಾಸದ ಅಂಗವಾಗಿ ಏರ್ಪಡಿಸಿದ್ದ ಮೆಹಂದಿ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಭಾಗವಹಿಸಿದ ವಿದ್ಯಾರ್ಥಿನಿಯರಿಗೆ ಹಾಗೂ ಎಲ್ಲಾ ಸಹೋದರಿಯರಿಗೆ (ತಾಯಂದಿರರಿಗೆ) ಶುಭ ಕೋರಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ನಾಗೇಂದ್ರ ಬಡಿಗೇರ, ಶಿಕ್ಷಕ ವೃಂದದವರು ಪಾಲ್ಗೊಂಡಿದ್ದರು.