ನಾಗರ ಪಂಚಮಿ; ಸಂಭ್ರಮ ಆಚರಣೆ

ಮುದಗಲ್,ಆ.೨೦-
ಐತಿಹಾಸಿಕ ಮುದಗಲ್ಲ ಪಟ್ಟಣದಲ್ಲಿ ಕೆಲವೆಡೆ ರವಿವಾರ ಸಂಭ್ರಮ-ಸಡಗರದಿಂದ ನಾಗರ ಪಂಚಮಿ ಆಚರಿಸಲಾಯಿತು.
ಬಹುತೇಕರು ಸಮೀಪದ ನಾಗರ ಕಲ್ಲಿನ ಮೂರ್ತಿಗೆ ವಿಶೇಷ ಪೂಜೆ ಮಾಡಿ ಹಾಲೆರೆದರೆ, ಕೆಲವರು ದೇವಸ್ಥಾನ ಆವರಣದಲ್ಲಿರುವ ಕಲ್ಲಿನ ನಾಗರ ಮೂರ್ತಿಗೆ ಹಾಲೆರೆದರು.
ಮನೆ ಬಾಗಿಲಿಗೆ ಮಾವಿನ ತೋರಣ ಕಟ್ಟಿ, ಮನೆ ಮುಂದೆ ನಾಗರ ಹಾವುಗಳ ಸುಂದರವಾದ ರಂಗೋಲಿ ಹಾಕುವ ಮೂಲಕ ಮಹಿಳೆಯರು ಬೆಳಿಗ್ಗೆಯೇ ಶ್ರಾವಣಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯನ್ನು ಸಂಭ್ರಮದಿಂದ ಸ್ವಾಗತಿಸಿದರು.
ಶೇಂಗಾ, ಪುಟಾಣಿ, ಕೊಬ್ಬರಿ ಉಂಡಿ ಸೇರಿದಂತೆ ಇತರ ಸಿಹಿ ಪದಾರ್ಥಗಳನ್ನು ದೇವರಿಗೆ ಅರ್ಪಿಸಿದರು. ಮುದಗಲ್ಲನ ಕುಂಬಾರ ಓಣಿಯಲ್ಲಿ ಇರುವ ಇರಣ್ಣನ ಗುಡಿಯ ಮುಂದೆ ಇರುವ ನಾಗರ ಮೂರ್ತಿಗೆ ಮಹಿಳೆಯರಾದ ಚಂದ್ರಕಲಾ, ಮಂಜುಳ, ನಂದಿನಿ ,ಶಾಂಭವಿ ಎಲ್ಲರೂ ಸೇರಿ ಹಾಲೆರೆದರು.
ಮುದಗಲ್ಲನ ದೇವಸ್ಥಾನದಲ್ಲಿರುವ ನಾಗರ ಮೂರ್ತಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.