ನಾಗರೀಕ ಸೇವಾ ಪರೀಕ್ಷೆ ಕಾರ್ಯಾಗಾರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.12: ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಅಲ್ಲಂ ಕರಿಬಸಪ್ಪ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೇಂಟ್ ಸಂಸ್ಥೆಯಲ್ಲಿ ಸಮುತ್ಕರ್ಷ ಸಂಸ್ಥೆಯ ಸಹಯೋಗದೊಂದಿಗೆ ನಾಗರಿಕ ಸೇವಾ ಪರೀಕ್ಷೆ ಕುರಿತು ಒಂದು ದಿನದ ಕಾರ್ಯಾಗಾರವನ್ನು ಎಂಬಿಎ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಫಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ಶರಣಪ್ಪ ಸಂಕನೂರ್ ಇವರು ಐಎಎಸ್ ಮತ್ತು ಐಪಿಎಸ್ ಹಾಗೂ ಇತರೆ ನಾಗರೀಕ ಸೇವಾ ಪರೀಕ್ಷೆಗಳನ್ನು ಹೇಗೆ ವಿದ್ಯಾರ್ಥಿಗಳು ಸಿದ್ದತೆಗೊಳ್ಳಬೇಕೆಂಬುದನ್ನು ವಿಸ್ತಾರವಾಗಿ ತಿಳಿಸಿದರು. ವಿದ್ಯಾರ್ಥಿಗಳು ಪೂರ್ವ ಸಿದ್ದತೆಯಾಗಿ ಮಾನಸಿಕ ಸಧೃಡತೆಯಿಂದ ಮತು ಕಠಿಣ ಪರಿಶ್ರಮದೊಂದಿಗೆ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು. ಹೆಚ್ಚು ಪುಸ್ತಕಗಳನ್ನು, ದಿನಪತ್ರಿಕೆಗಳನ್ನು ಓದುವ ಅಭ್ಯಾಸವನ್ನು ರೂಢಿಸಿಕೊಂಡರೆ ಪರೀಕ್ಷೆಯನ್ನು ನಿರ್ಭಯವಾಗಿ ಬರೆಯಬಹುದೆಂದು ತಿಳಿಸಿದರು. ಸಮುತ್ಕರ್ಷ ಸಂಸ್ಥೆಯ ಮತ್ತು ಅಕಿಮ್ ಸಂಸ್ಥೆಯು ಕಾರ್ಯಾಗಾರವನ್ನು ಆಯೋಜಿಸಿದ್ದಕ್ಕೆ ಶ್ಲಾಘಿಸುತ್ತಾ ಇನ್ನು ಹೆಚ್ಚಿನ ವಿದ್ಯಾರ್ಥಿಗಳಿಗೆ ತಲುಪುವಂತಾಗಲು ಕ್ರಮಕೈಗೊಳ್ಳಲು ಸೂಚಿಸಿದರು. ಸಮುತ್ಕರ್ಷ ಸಂಸ್ಥೆಯ  ಡಾ. ವಿಜಯಭಾಸ್ಕರ ರೆಡ್ಡಿ ಯವರು ಮಾತನಾಡಿ ನಮ್ಮ ಸಂಸ್ಥೆಯಿಂದ ಉಚಿತ ತರಬೇತಿನೀಡಲಾಗುವುದು ಎಲ್ಲ ವಿದ್ಯಾರ್ಥಿಗಳು ತರಬೇತಿಯನ್ನು ಪಡೆದು ಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಜಾನೇಕುಂಟೆ ಸಣ್ಣ ಬಸವರಾಜ, ಆಡಳಿತ ಮಂಡಳಿ ಸದಸ್ಯರಾದ ಅಲ್ಲಂ ವಿನಾಯಕ, ಡಾ.ಕೆ.ಟಿ.ಗೋಪಿ, ನಾಗರಾಜ ಶರ್ಮ ವಿ, ಬಿ. ರವೀಂದ್ರನಾಥ್, ವೈ. ರವಿ, ಸಂಸ್ಥೆಯ ನಿರ್ದೇಶಕರು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.