ನಾಗರೀಕ ಸಮಸ್ಯೆ ಪರಿಹಾರಕ್ಕೆ ಸಿದ್ಧರಾಮಯ್ಯರಿಗೆ ಮನವಿ

ಕೋಲಾರ,ನ,೧೪:ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಗೆ ಸೂಪರ್ ಸ್ಪೆಷಲಿಟಿ ಆಸ್ಪತ್ರೆಯನ್ನು ಮಂಜೂರಾತಿಗೆ, ಮೇಕೆದಾಟು ಯೋಜನೆಯಲ್ಲಿ ಕೋಲಾರ ಜಿಲ್ಲೆಯನ್ನು ಸೇರ್ಪಡೆಗೆ ಮಾಡಲು, ಕರ್ನಾಟಕ ರಾಜ್ಯದ ಪ್ರತಿ ಜಿಲ್ಲಾ ಕೇಂದ್ರದಲ್ಲಿ ನಿವೃತ್ತ ಪೊಲೀಸ್ ಸಿಬ್ಬಂದಿಗೆ ನೌಕರರ ಭವನ ನಿರ್ಮಿಸುವಂತೆ ಮತ್ತು ಕೋಲಾರ ನಗರಸಭೆಯಲ್ಲಿ ಬಾಕಿ ಇರುವ ೧೪೩ ಹುದ್ದೆಗಳ ಭರ್ತಿ ಮಾಡಲು ಹಾಗೂ ತುಂಗಬದ್ರಾ ನದಿ ನೀರನ್ನು ಕೋಲಾರಕ್ಕೆ ಹರಿಸುವಂತೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಕೆ.ಎನ್.ರವೀಂದ್ರನಾಥ್ ರವರು ಮಾಜಿ ಮುಖಯಮಂತ್ರಿ ಸಿದ್ಧರಾಮಯ್ನವರಿಗೆ ಮನವಿ ಸಲ್ಲಿಸಿದರು.
ಕುರುಬರ ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಾಣದ ಬಗ್ಗೆ ಸಿದ್ಧರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಕೋಟಿ ಮಂಜೂರು ಮಾಡಿಸಿದ್ದು ಇನ್ನೂ ಕಾರ್ಯಗತವಗದೆ ಇರುವ ಬಗ್ಗೆ. ಕೋಲಾರ ಜಿಲ್ಲೆಯ ಗಡಿ ಭಾಗದಲ್ಲಿ ಆಂಧ್ರಪ್ರದೇಶ ದಿಂದ ಕುಪ್ಪಂಗೆ ಕುಡಿಯುವ ನೀರಿಗಾಗಿ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು ಕೋಲಾರ ಜಿಲ್ಲೆಗೆ ಕುಡಿಯುವ ನೀರಿನ ತೊಂದರೆ ಇದ್ದು ತುಂಗಭದ್ರಾನದಿಯ ನೀರಿನ ನಮ್ಮ ಪಾಲಿನ ೩ ಟಿಎಂಸಿ ನೀರನ್ನು ಜಿಲ್ಲೆಗೆ ಒದಗಿಸಲು ಆಂಧ್ರಪ್ರದೇಶದ ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸಿ ಮತ್ತು ಸದನದಲ್ಲಿ ಪ್ರಸ್ತಾಪ ಮಾಡಿ ಮಂಡಿಸಲು ಎತ್ತಿನ ಹೊಳೆ ಮತ್ತು ಯರಗೋಳ್ ಯೋಜನೆ ವಿಳಂಬವಾಗಿದ್ದು, ಶ್ರೀಘದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರಕ್ಕೆ ಒತ್ತಾಯ ಮಾಡಲು. ಶುದ್ಧ ನೀರಿನ ಘಟಕ ಗಳಿಂದ ನಾಗರಿಕರಿಗೆ ಉಚಿತವಾಗಿ ನೀರನ್ನು ನೀಡಲು ಸರ್ಕಾರದ ಮೇಲೆ ಒತ್ತಡ ತರಬೇಕಾಗಿದೆ ಎಂದರು
ಕೋಲಾರ ನಗರದ ಮೆಕ್ಕೆ ವೃತದಿಂದ ಕ್ಲಾಕ್ ಟವರ್ ವರೆಗೆ ೧೦ ಕೋಟಿ ವೆಚ್ಚದಲ್ಲಿ ರಸ್ತೆ ಅಗಲಿಕರಣ ಮಾಡಿದ್ದು ರಸ್ತೆಯ ಅಕ್ಕಪಕ್ಕ ಮನೆಗಳನ್ನು ಹೊಂದಿರುವ ಕುರುಬರ ಪೇಟೆ, ಗೌರಿಪೇಟೆ, ಕಠಾರಿಪಾಳ್ಯದ ಮನೆಗಳನ್ನು ಮತ್ತು ದೇವಾಲಯಗಳನ್ನು ಕೆಡವಿದ್ದು ಮನೆ ಮಾಲಿಕರಿಗೆ ಪರಿಹಾರ ಮತ್ತು ದೇವಾಲಯಗಳ ಪುನರ್ ನಿರ್ಮಾಣ ಮಾಡಲು ಸರ್ಕಾರದ ಮೇಲೆ ಒತ್ತಡ ತರಲು ಕೋರಿದೆ. ಹಿಂದುಳಿದ ವರ್ಗದವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಉಚಿತವಾಗಿ ಪ್ರಾಥಮಿಕ ಶಾಲೆಯಿಂದ ಉನ್ನತ ವಿದ್ಯಾಭ್ಯಾಸದವರೆಗೆ ಮತ್ತು ಖಾಸಗಿ ಶಾಲೆಗಳಲ್ಲಿಯೂ ಸಹ ಉಚಿತ ಶಿಕ್ಷಣ ಆದ್ಯತೆ ಮೇರೆಗೆ ಕೊಡಿಸಲು ಸರ್ಕಾರದ ಮೇಲೆ ಒತ್ತಡ ತರಲು ಕೋರಿದೆ.೭.ಕೋಲಾರ ಜಿಲ್ಲೆಗೆ ಕ್ಯಾನ್ಸರ್ ಆಸ್ಪತ್ರೆ, ಕೃಷಿ ಕಾಲೇಜು, ವ್ಯೆದ್ಯಕೀಯ ಕಾಲೇಜು, ಪಶು ವ್ಯೆದ್ಯಕೀಯ ಕಾಲೇಜು ಮಂಜೂರು ಮಾಡಿಸಲು ಸರ್ಕಾರದ ಮೇಲೆ ಒತ್ತಡ ತರಲು ಮನವಿ ಪತ್ರ ಸಲ್ಲಿಸುವ ಮೂಲಕ ಕೋರಿದರು.