ನಾಗರೀಕ ಬಂದೂಕು ತರಬೇತಿ ಶಿಬಿರದ ಸಮಾರೋಪ ಸಮಾರಂಭ

ಆನೇಕಲ್, ಆ. ೬- ಪಟ್ಟಣದ ತಿಮ್ಮರಾಯಸ್ವಾಮಿ ರಸ್ತೆಯಲ್ಲಿರುವ ಬ್ರಾಹ್ಮಣರ ಸಮುದಾಯ ಭವನದ ಆವರಣದಲ್ಲಿ ಬೆಂಗಳೂರು ನಗರ ಜಿಲ್ಲಾ ಪೋಲಿಸ್ ವತಿಯಿಂದ ಆಯೋಜಿಸಿದ್ದ ನಾಗರೀಕ ಬಂದೂಕು ತರಬೇತಿ ಶಿಬಿರದಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಎಸ್.ಪಿ. ಮಲ್ಲಿಕಾರ್ಜುನ ಬಾಲದಂಡಿರವರು ತರಬೇತಿ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಿದರು.
ಈ ವೇಳೆ ಎಸ್.ಪಿ. ಮಲ್ಲಿಕಾರ್ಜುನ ಬಾಲದಂಡಿರವರು ಮಾತನಾಡಿ ಆನೇಕಲ್ ಕ್ಷೇತ್ರದಲ್ಲಿ ಅಪರಾಧ ಪ್ರಕರಣಗಳನ್ನು ಕಡಿವಾಣ ಹಾಕಲು ಪ್ರತಿಯೊಬ್ಬರೂ ಸಹಕರಿಸಬೇಕು ಜೊತೆಗೆ ಸಾರ್ವಜನಿಕರು ತಮ್ಮ ಮನೆ ಸುತ್ತ ಮುತ್ತಲಿನ ಪ್ರದೇಶದಲ್ಲಿ ಅಪರಾಧ ಪ್ರಕರಣಗಳು ನಡೆದಾಗ ಕೂಡಲೇ ಸ್ಥಳೀಯ ಪೋಲಿಸ್ ಠಾಣೆಗೆ ಮಾಹಿತಿ ನೀಡಬೇಕು ಎಂದರು. ಸಮಾಜದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಬಂದೂಕು ತರಬೇತಿ ಪಡೆದ ಶಿಭಿರಾರ್ಥಿಗಳು ಪೋಲಿಸ್ ಇಲಾಖೆ ಜೊತೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಲಕ್ಷ್ಮಿ ನಾರಾಯಣ್, ಡಿವೈಎಸ್ಪಿ ಮಹೇಶ್, ಇನ್ಸ್ ಪೆಕ್ಟರ್ ಗಳಾದ ಚಂದ್ರಪ್ಪ, ಭಾನುಪ್ರಕಾಶ್, ಹೆಡ್ ಕಾನ್ಟೇಬಲ್ ಗಳಾದ ರಾಘವೇಂದ್ರ, ಕೃಷ್ಣ, ಗನ್ ಟ್ರೈನರ್ ಮತ್ತು ಹೆಡ್ ಕಾನ್ಸ್ಟೇಬಲ್ ಗಳಾದ ಮಲ್ಲಿಕಾರ್ಜುನ್, ಪ್ರಮೋದ್ ಕುಮಾರ್, ಎಸ್.ಆರ್.ಲೋನಿ, ಹರ್ಷವರ್ಧನ, ವಿಠಲ ನಾಗಮಣಿ, ಶಿಭಿರಾರ್ಥಿಗಳಾದ ಎನ್, ಶಂಕರ್. ಆನೇಕಲ್ ಮಾದೇಶ್ ಗೌಡ, ಬಿ.ಕೆ.ಈಶ್ವರ್ ರೆಡ್ಡಿ, ಜೆ.ರಾಜೇಂದ್ರ, ಮನು, ಬಾಬು, ಚಂದ್ರಶೇಕರ್, ಪ್ಯಾನ್ಸಿ ರಮೇಶ್, ರಾಜಪ್ಪ ಮತ್ತು ಶಿಬಿರಾರ್ಥಿಗಳು ಭಾಗವಹಿಸಿದ್ದರು.