ನಾಗರೀಕರ ಸೇವೆಗೆ ಪೊಲೀಸ್ ಇಲಾಖೆ ಸದಾ ಸಿದ್ದ : ಎ.ಎಸ್.ಐ. ಚಂದ್ರಪ್ಪ

ಶಿವಮೊಗ್ಗ, ಮಾ. 22: ‘ಅಪರಾಧ ಚಟುವಟಿಕೆ ನಿಯಂತ್ರಣದಲ್ಲಿ ನಾಗರೀಕರ ಸಹಕಾರ ಅತ್ಯಂತ ಮುಖ್ಯವಾಗಿದೆ’ ಎಂದು ವಿನೋಬನಗರ ಪೊಲೀಸ್ ಠಾಣೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎ.ಎಸ್.ಐ.)  ಹೆಚ್.ಚಂದ್ರಪ್ಪರವರು ತಿಳಿಸಿದ್ದಾರೆ.ನಗರದ ಹೊರವಲಯ ಕೆ.ಹೆಚ್.ಬಿ ಪ್ರೆಸ್ ಕಾಲೋನಿಯಲ್ಲಿ ಆಯೋಜಿಸಲಾಗಿದ್ದ ಮೊಹಲ್ಲಾ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದ ನಂತರ ಅವರು ಮಾತನಾಡಿದರು.ನಾಗರೀಕರ ಸೇವೆಗೆ ಪೊಲೀಸ್ ಇಲಾಖೆ ಸದಾ ಸಿದ್ದವಾಗಿರುತ್ತದೆ.  ಕಾನೂನು-ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಿದೆ. ಏನೇ ಸಮಸ್ಯೆಗಳಿದ್ದರೂ ನಾಗರೀಕರು ಪೊಲೀಸರ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.ತುರ್ತು ಸ್ಪಂದನಾ ಸಹಾಯ ವ್ಯವಸ್ಥೆ (ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಮ್ ) 112 ಅಥವಾ 100 ಸಂಖ್ಯೆಗೆ ಕರೆ ಮಾಡಿದರೆ, ಕೆಲ ನಿಮಿಷಗಳಲ್ಲಿಯೇ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ, ಅಗತ್ಯ ಕ್ರಮಕೈಗೊಳ್ಳಲಿದ್ದಾರೆ‌ ಎಂದು ಹೇಳಿದರು.ಪ್ರತಿ ಬಡಾವಣೆಗೆ ವ್ಯಾಟ್ಸಾಪ್ ಗ್ರೂಪ್ ರಚಿಸಲಾಗಿದೆ. ನಿವಾಸಿಗಳ ಮೊಬೈಲ್ ನಂಬರ್’ಗಳನ್ನು ಗ್ರೂಪ್’ಗೆ ಸೇರ್ಪಡೆಗೊಳಿಸಲಾಗುತ್ತದೆ. ಏನೇ ಸಮಸ್ಯೆಗಳಿದ್ದರೂ ಗ್ರೂಪ್’ನಲ್ಲಿ ಮಾಹಿತಿ ಹಾಕಬಹುದಾಗಿದೆ. ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಸ್ಪಂದಿಸಲಾಗುವುದು ಎಂದು ಹೇಳಿದರು.ನಿವಾಸಿಗಳು ಅಹವಾಲು ತೋಡಿಕೊಂಡರು. ಬಡಾವಣೆಗೆ ಹಗಲು – ರಾತ್ರಿ ಪ್ರತಿನಿತ್ಯ ಗಸ್ತು ವಾಹನ ಓಡಾಟಕ್ಕೆ ಕ್ರಮಕೈಗೊಳ್ಳಬೇಕು. ಬೀಟ್ ಪಾಯಿಂಟ್ ಗಳನ್ನು ಮಾಡಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಬಡಾವಣೆ ನಿವಾಸಿಗಳಾದ ಪತ್ರಕರ್ತ ಬಿ.ರೇಣುಕೇಶ್, ಶ್ರೀಕಾಂತ್, ಕಿರಣ್ ಕುಮಾರ್, ಶ್ರೀಧರ್, ನಾಗರಾಜ್, ವಿನೋಬನಗರ ಠಾಣೆ ಸಿಬ್ಬಂದಿ ಧನರಾಜ್, ಗೃಹ ರಕ್ಷಕ ದಳ ಸಿಬ್ಬಂದಿ ಗಿರೀಶ್ ಸೇರಿದಂತೆ ಮೊದಲಾದವರಿದ್