ನಾಗರೀಕರ ಸಮಸ್ಯೆಗೆ ದೊರೆತ ಪರಿಹಾರ

ಕೆಜಿಎಫ್:ಮೇ:೨೨: ಕಳೆದ ೪ ದಿನಗಳಿಂದ ಸುರಿದ ವರುಣನ ಆರ್ಭಟಕ್ಕೆ ನಗರಸಭೆ ವ್ಯಾಪ್ತಿಯ ಗೀತಾ ವಾರ್ಡ್ ಸ್ವರ್ಣಕುಪ್ಪಂ ಬಡವಾಣೆಯಲ್ಲಿನ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಗೊಂಡಿತ್ತು ಮಾಹಿತಿ ಪಡೆದ ನಗರಸಭೆ ಸದಸ್ಯ ರಾಧವಿಜಿಕುಮಾರ ರಾತ್ರಿ ೧೨ ಗಂಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಗರಸಭೆ ಸದಸ್ಯ ರಾಧವಿಜಿಕುಮಾರ ತಕ್ಷಣ ಜೆಸಿಬಿಯನ್ನು ಸ್ಥಳಕ್ಕೆ ಕರೆಸಿ ಮನೆಗಳಿಗೆ ನುಗ್ಗಿದ್ದ ನೀರನ್ನು ಹೊರ ಹಾಕಿದ್ದು ಶಾಶ್ವತವಾಗಿ ಯಾವುದೆ ಮಳೆ ಬಂದರು ಮಳೆ ನೀರು ಮನೆಗಳಿಗೆ ನೀರು ನುಗ್ಗದಂತೆ ಶಾಶ್ವತವಾದ ತಡೆಗೊಡೆ ನಿರ್ಮೀಸುವ ಮೂಲಕ ಪರಿಹಾರವನ್ನು ಕೈಗೊಂಡರು ಆದೇ ರೀತಿ ಸ್ವರ್ಣ ಕುಪ್ಪಂ ಬಡಾವಣೆಯ ನಾಗರೀಕರು ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ನೂತನ ಕೊಳವೆಬಾವಿ ಕೋರೆಸುವ ಮೂಲಕ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿದರು.
ಈ ವೇಳೆ ಮಾತನಾಡಿದ ನಗರಸಭೆ ಸದಸ್ಯ ರಾಧವಿಜಿಕುಮಾರ ಗೀತಾ ವಾರ್ಡ್ ಸ್ವರ್ಣ ಕುಪ್ಪಂ ಬಡವಾಣೆಯಲ್ಲಿ ನಿರ್ಮೀಸಲಾಗಿರುವ ಮನೆಗಳು ತಗ್ಗು ಪ್ರದೇಶದಲ್ಲಿರುವುದರಿಂದ ಮಳೆ ಬಂದರೆ ಸಾಕು ಮಳೆ ನೀರು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿ ಮಾಡುತ್ತಿತ್ತು ಈ ಹಿನ್ನಲೆಯಲ್ಲಿ ಮಳೆ ನೀರು ಮನೆಗಳಿಗೆ ನುಗ್ಗದಂತೆ ತಡೆ ಗೋಡೆ ನಿರ್ಮೀಸಿ ಮಳೆ ನೀರು ಇತರೆಡೆ ಹರಿಯುವಂತೆ ಮಾಡಲಾಗಿದ್ದು ಶಾಶ್ವತವಾಗಿ ಸಮಸ್ಯೆ ಬಗೆಹರಿಸಲಾಗಿದೆ ಆದೇ ರೀತಿ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿತ್ತು ಆದ್ದರಿಂದ ನಗರಸಭೆಯ ತುರ್ತು ಪರಿಹಾರ ನಿಧಿಯಡಿ ಬಿಡುಗಡೆಗೊಂಡಿರುವ ಅನುದಾನದಲ್ಲಿ ನೂತನವಾದ ಕೊಳವೆಬಾವಿ ಕೊರೆಸಿ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲಾಗಿದೆ ಎಂದು ಹೇಳಿದರು.
ಈ ವೇಳೆ ನಗರಸಭೆ ಅಧಿಕಾರಿಗಳಾದ ರಾಮು ಹಾಗೂ ಇತರರು ಹಾಜರಿದ್ದರು.