ನಾಗರೀಕರ ಜೊತೆ ಕುಣಿದು ಕುಪ್ಪಳಿಸಿದ ಲೋಕಸಭಾ ಸದಸ್ಯರು 

ಶಿವಮೊಗ್ಗ, ಸೆ. 13: ಇತ್ತೀಚೆಗೆ ಶಿವಮೊಗ್ಗ ನಗರದಲ್ಲಿ ನಡೆದ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ವೇಳೆ, ಭರ್ಜರಿ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರರವರು, ಸೋಮವಾರ ರಾತ್ರಿ ಶಿಕಾರಿಪುರ ತಾಲೂಕು ಶಿರಾಳಕೊಪ್ಪದಲ್ಲಿ ನಡೆದ ಗಣೇಶೋತ್ಸವ ಮೆರವಣಿಗೆಯಲ್ಲಿಯೂ ನಾಗರೀಕರ ಜೊತೆ ಕುಣಿದು ಕುಪ್ಪಳಿಸಿದ್ದಾರೆ! ಮೆರವಣಿಗೆಯಲ್ಲಿದ್ದವರೂ ಕೂಡ ಸಂಸದರ ಡ್ಯಾನ್ಸ್ ಗೆ ಚಪ್ಪಾಳೆ, ಶಿಳ್ಳೆ ಹಾಕಿ ಹುರುದುಂಬಿಸಿದ್ದಾರೆ. ಸಂಸದರ ಡ್ಯಾನ್ಸ್ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಇತ್ತೀಚೆಗೆ ಬಿ.ವೈ.ರಾಘವೇಂದ್ರ ಅವರ ಬಿಂದಾಸ್ ಡ್ಯಾನ್ಸ್ ಎಲ್ಲರ ಗಮನ ಸೆಳೆಯುತ್ತಿದೆ.