ನಾಗರಿಕ ಸೇವಾ ನಿಯಮ ಕರಡು ಸರಿಪಡಿಸಲು ಆಗ್ರಹ

ಕಲಬುರಗಿ:ನ.11:ನಾಗರಿಕ ರಾಜ್ಯ ಸೇವಾ (ನಡೆತೆ) ನಿಯಮಗಳು 2020 ರ ಅಂಶಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟ ಜಿಲ್ಲಾ ಶಾಖೆ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ನಾಗರಿಕ ಸೇವಾ ನಿಯಮಗಳು ಜಾರಿಗೆ ತರುವ ಸಲುವಾಗಿ ಕರಡು ಅಂಶಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಉಲ್ಲೇಖಿತ ಆಧಿಸೂಚನೆ ಹೊರಡಿಸಿರುತ್ತದೆ. ಆದರೆ ಕರಡಿನಲ್ಲಿ ಪ್ರಸ್ತಾಪಿಸಲಾಗಿರು ಕೆಲವು ಅಂಶಗಳು ನೌಕರರಲ್ಲಿ ಆತಂಕವನ್ನುಂಟು ಮಾಡಿದೆ ಎಂದು ಒಕ್ಕೂಟದ ಅಧ್ಯಕ್ಷ ಶರಣಬಸಪ್ಪಗೌಡ ಪಾಟೀಲ ಹೇಳಿದ್ದಾರೆ. ಈ ಮೊದಲು ಹಲವಾರು ಸುತ್ತೋಲೆಗಳು ಮತ್ತು ಆದೇಶಗಳು ನೌಕರರ ನಡತೆಗಳನ್ನು ನಿಯಂತ್ರಿಸುತ್ತಿದ್ದವು. ಈಗ ಪ್ರಕಟಿಸಿರುವ 2020ರ ಕರಡು ನಿಯಮಾವಳಿಗಳಲ್ಲಿ ಹೊಸದೇನು ಇಲ್ಲ. ಬದಲಿಗೆ 1966ರ ನಿಯಮಗಳನ್ನೆ ಪುನರ ಸ್ಥಾಪಿಸಿಲಾಗುತ್ತಿದೆ ಎಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ನೌಕರರ ಮೂಲಭೂಈತ ಹಕ್ಕುಗಳಿಗೆ ಬಹುದೊಡ್ಡ ಪೆಟ್ಟು ನೀಡುವ ನಿಯಮಗಳನ್ನೇ ಜಾರಿಗೊಳಿಸಲು ಹೊರಟಿರುವದು ಆಘಾತಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಉದ್ಧೇಶಿತ ನಡತೆ ನಿಯಮಗಳ ಜಾರಿಯ ಪ್ರಸ್ತಾವನ್ನು ಸರಕಾರವು ಸಂಪೂರ್ಣವಾಗಿ ಕೈಬಿಡಬೇಕು ಎಂದು ಒಕ್ಕೂಟ ಬಲವಾಗಿ ಒತ್ತಾಯಿಸಿದೆ. ಒಕ್ಕೂಟದ ಕಾರ್ಯದರ್ಶಿ ಬಿ.ಎಸ್.ಭಾಗೋಡಿ, ಡಿ.ಬಿ.ಪಾಟೀಲ, ಡಾಂಗೆ ಎಸ್.ಐ, ವಿಠ್ಠಲ ಭಾವಗೆ, ಪ್ರಕಾಶ ಬಿರಾದಾರ, ಪ್ರಭು ಕಲಶೆಟ್ಟಿ, ಪ್ರಕಾಶ ಭಜಂತ್ರಿ, ರಾಘವೇಂದ್ರ ಕೆಳಮನಿ, ಎಸ್.ಪಿ.ಸುಳ್ಳದ್ ಮುಂತಾದವರು ಪ್ರತಿಭಟನೆಯಲ್ಲಿದ್ದರು.