ನಾಗರಿಕ ಸಮಾಜ ತಲೆತಗ್ಗಿಸುವ ಜೈನಮುನಿಗಳ ಹತ್ಯೆ ಸಿಬಿಐ ತನಿಖೆಗೆ ವಹಿಸಿ

(ಸಂಜೆವಾಣಿ ವಾರ್ತೆ)
ವಿಜಯಪುರ: ಜು.11:ಭಾರತ ಇಂದು ಸಂಪದ್ಬರಿತ ದೇಶವಾಗಿದೆ ಕಾರಣ ಹಲವೂ ಸಾಧು ಸಂತರು ತಪ್ಪಸ್ಸಿನ ಫಲವಾಗಿದೆ ಭಾರತ ಜಾತ್ಯಾತೀತ ರಾಷ್ಟ್ರವಾದರೂ ಪ್ರತಿಯೊಂದು ಧರ್ಮವೂ ತನ್ನದೇ ಆದ ಶ್ರೇಷ್ಠ ಹಿನ್ನೆಲೆ ಹೊಂದಿದೆ ಜೈನ ಧರ್ಮ ಅಹಿಂಸಾತ್ಮಕ ತತ್ವದಡಿ ಇಡಿ ವಿಶ್ವಕೋಶದ ಭಾಗವಾಗಿ ವಿಶ್ವದೆಲ್ಲೇಡೆ ಜೈನ ಧರ್ಮ ‘ಅಹಿಂಸಾ ಪರಮೋ ಧರ್ಮ’ ಎಂದು ಸಾರುವ ಶ್ರೇಷ್ಠ ಧರ್ಮಗಳಲ್ಲೊಂದು,ಧಾರ್ಮಿಕ ಹಿನ್ನೆಲೆಯೊಂದಿಗೆ ತೀಥರ್ಂಕರ ಹಾಗೂ ಭಗವಾನ ಮಹಾವೀರ,ವೃಷಭನಾಥರಂತಹ ದಾರ್ಶನಿಕರ ಇದೇ ಸಮಾಜದವರು,ವಿಶ್ವಕ್ಕೆ ಶಾಂತಿ ಸೌಹಾರ್ದತೆಯ ಮೂಲವನ್ನು ಸಾರಿದವರು,ವಾಸ್ತುಶಿಲ್ಪ,ಸಾಹಿತ್ಯ,ಹೀಗೆ ನಾನಾವಲಯಗಳಲ್ಲಿ ಭಾರತಕ್ಕೆ ಜೈನ ಸಮುದಾಯ ಅಪಾರ ಕೊಡುಗೆಯನ್ನಿಡಿದೆ, ಆದರೆ ಕರುನಾಡಿನ ಈ ಧಾರುಣ ಘಟಣೆ ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ,ಚಿಕ್ಕೋಡಿ ತಾಲ್ಲೂಕಿನ ಹಿರೆಕೂಡಿ ಗ್ರಾಮದ ಜೈನಮುನಿ ಶ್ರೀಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ಅಹಿಂಸಾ ಮಾರ್ಗದಲ್ಲಿ ಸಾಗುತ್ತಿದ್ದ ಹಾಗೂ ಬಡಜನರಿಗೆ ಉಪಕಾರ ಮಾಡುತ್ತಿದ್ದ ಜೈನಮುನಿಗಳ ಹಲ್ಲೆ ನಾಗರಿಕ ಸಮಾಜ ತಲ್ಲೆತಗ್ಗಿಸುವಂತ ಹೀನ ಕೃತ್ಯ , ಮಾನವೀಯತೆ ಇಲ್ಲದ ದುಷ್ಟ ಶಕ್ತಿಗಳು ಸಜ್ಜನ ಸಾಧುಗಳನ್ನು ಹತ್ಯೆಗೈದು ಸಮಾಜದ ಉತ್ತಮ ಸ್ವಾಸ್ಥ್ಯ ಕದಡುವ ನಿರ್ಲಜ್ಜ ಕೆಲಸ ಖಂಡನೀಯವಾಗಿದೆ.
ಧಾರ್ಮಿಕ ಮತ್ತು ಸಾಮಾಜಿಕ ಕಳಕಳಿಯಿಂದ ಕಾರ್ಯನಿರ್ವಹಿಸುವ ಸಂತರಿಗೆ ಈ ಪರಿಸ್ಥಿತಿಯಾದರೆ ಸಾಮಾನ್ಯ ಜನರ ಪಾಡೇನು,ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಹಿಂದು ವಿರೋಧಿ ನೀತಿ ಒಂದೇ ಅಲ್ಲ ಈ ಸರ್ಕಾರದಲ್ಲಿ ಸಾಧು,ಸಂತರ ಜೀವಕ್ಕು ಬೆಲೆ ಇಲ್ಲದಂತಾಗಿದೆ ಪಶ್ಚಿಮ ಬಂಗಾಳದ ಕೋಮು ಗಲಭೆ,ಹಾಗೂ ಸರಿಸುಮಾರು 21 ಅಮಾಯಕ ಹಿಂದುಗಳ ಹತ್ಯೆ,ಇಂದೂ ಕೂಡ ಟೀ.ನರಸಿಪುರದ ಅಮಾಯಕ ಹಿಂದುವಿನ ಹತ್ಯೆ ಸಮಾಜದಲ್ಲಿ ಎಲ್ಲೆಂದರಲ್ಲಿ ಕೊಲೆ ಸುಲಿಗೆ ಈ ಸರ್ಕಾರದಲ್ಲಿ ವ್ಯಾಪಕವಾಗಿದೆ, ದೌರ್ಜನ್ಯ ಎಲ್ಲೆಮೀರಿದೆ ಕಾನೂನುರಂಗದ ಇದೇಯೋ ಇಲ್ಲವೋ ಎಂದು ಎನಿಸುತ್ತಿದೆ ಆದ್ದರಿಂದ ಜೈನಮುನಿಗಳ ಕುಲಂಕುಶವಾಗಿ ವಿಚಾರಿಸಲು ಅಮಾನುಷ ಕೊಲೆಗೈದ ಪಾಪಿಗಳನ್ನು ಗಲಿಗೇರಿಸಲು ಸಿಬಿಐಗೆ ವಹಿಸಿ ಈ ಸರ್ಕಾರ ನಂಬಿಕೆ ಕಳೆದುಕೊಂಡಿದೆ,ಮುಖ್ಯಮಂತ್ರಿಗಳದಾ ಸಿದ್ದರಾಮಯ್ಯನವರದ್ದು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಗುಂಡಾ ಸರ್ಕಾರದವಾಗಿದ್ದು ಎಲ್ಲೇಡೆ ಕೋಮುಪ್ರಚೋದನೆ,ಪಿಎಫೈ ,ದೇಶವಿರೋಧಿ ಚಟುವಟಿಕೆಗಳ ಪೆÇೀಷಿಸುವ ಸಂಘಟನೆಗಳಿಗೆ ಬೆಂಗಾವಾಲಾಗಿ ನಿಲ್ಲುವ ನಿರ್ಲಜ್ಜ ಸರ್ಕಾರವಾಗಿ ಮಾರ್ಪಟ್ಟಿದೆ,
ಈ ಸರ್ಕಾರದ ಅಧಿಕಾರಕ್ಕೆ ಬಂದಾಗಿನಿಂದಲೂ ಅರಾಜಕತೆ ಸೃಷ್ಟಿಯಾಗಿದೆ,ಭಯದ ವಾತಾವರಣ ನಿರ್ಮಾಣವಾಗಿ ಸಮಾಜದ ಸಾಮರಸ್ಯವೇ ಇಲ್ಲದಂತಾಗಿದೆ ಕೂಡಲೇ ಜೈನಮುನಿಯ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ನ್ಯಾಯ ದೊರಕಿಸಿ ಇಲ್ಲವಾದಲ್ಲಿ ಅಧಿಕಾರ ತ್ಯಾಗ ಮಾಡಿ ಮನೆಲಿ ಕುತ್ಕೊಳ್ಳಿ ಎಂದು ಈ ಮೂಲಕ ಖಂಡನೀಯವಾಗಿದೆ ಎಂದು ವಿಜಯಪುರ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಆರ್.ಎಸ್.ಪಾಟೀಲ (ಕೂಚಬಾಳ) ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.