ನಾಗರಿಕರ ಸಮಸ್ಯೆ ನಿವಾರಣೆ: ಶಾಸಕ ಟೆಂಗಿನಕಾಯಿ ಭರವಸೆ


ಹುಬ್ಬಳ್ಳಿ,ಅ.3: ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕರಾದ ಮಹೇಶ ಟೆಂಗಿನಕಾಯಿ ಅವರು ಶಿರೂರ ಪಾರ್ಕ ಎರಡು ಹಾಗೂ ಮೂರನೆಯ ಹಂತದ ನಿವಾಸಿಗಳ ಸಂಘಕ್ಕೆ ಬೆಟ್ಟಿಕೊಟ್ಟು ಇಲ್ಲಿಯ ಮೂಲಭೂತ ಸಮಸ್ಯೆಗಳ ಕುರಿತು ನಾಗರಿಕರ ಜೊತೆಗೆ ಸಂವಾದ ನಡೆಸಿದರು. ಟೆಂಡರ ಶ್ಯುರ್ ರಸ್ತೆಯ ಕಸದ ಸಮಸ್ಯೆ, ನೀರಿನ ಸಮಸ್ಯೆ, ಗಾರ್ಡನ್ ಸಮಸ್ಯೆ, ಓಪನ್ ಸಮಸ್ಯೆ, ಕಳ್ಳರ ಸಮಸ್ಯೆ, ಬೀದಿ ದೀಪಗಳ ಸಮಸ್ಯೆ, ಯದ್ವಾ ತದ್ವಾ ವಾಹನ ಚಾಲನೆಯ ಸಮಸ್ಯೆ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ನಾಗರಿಕರು ಚರ್ಚಿಸಿದಾಗ ಶಾಸಕರು ಸೂಕ್ತ ರೀತಿಯಲ್ಲಿ ಎಲ್ಲ ಸಮಸ್ಯೆಗಳಿಗೆ ಸ್ಪಂದನೆ ಮಾಡುವುದಾಗಿ ಬರವಸೆ ನೀಡಿದರು.ಅಲ್ಲದೆ ಪ್ರತಿ ಆರು ತಿಂಗಳಿಗೊಮ್ಮೆ ಬಡಾವಣೆಗೆ ಮೂಲಭೂತ ಸಮಸ್ಯೆಗಳನ್ನು ಚರ್ಚಿಸಲು ಅಧಿಕಾರಿಗಳ ತಂಡದೊಂದಿಗೆ ಬೆಟ್ಟಿ ನೀಡುವುದಾಗಿ ಬರವಸೆ ನೀಡಿದರು. ಸಂಘದ ಅಧ್ಯಕ್ಷರಾದ ಡಾ. ಮಹೇಶ ಹೊರಕೇರಿ ಅವರು ಪ್ರಾಸ್ತಾವಿಕಾವಾಗಿ ಮಾತನಾಡಿ ಸ್ವಾಗತಿಸಿ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರು, ಸಂಘದ ಗೌರವಾಧ್ಯಕ್ಷರಾದ ಎಂ ವಿ ಕರಮರಿ, ಎಸ್ ಎಸ್ ಹಂಗರಕಿ, ಶೈಲೇಶ ಹೊನ್ನಳ್ಳಿ, ಎನ್ ಎಸ್ ಯತ್ನಳ್ಳಿ , ಬಸವಪ್ರಭು ಪಾಟೀಲ, ಶಶಿಮಂಗಳಾ ಐತಾಳ, ಶ್ರೀಮತಿ ಪ್ರತಿಮಾ ನಾಯಕ, ಅನಂತ ಐತಾಳ, ದಿನೇಶ ಸವ್ವಾಸೆ, ಶಿವಾನಂದ ಹಳವೂರು, ಶಿವಯ್ಯ ಬೆಳ್ಳೆರಿಮಠ, ಬಸವರಾಜ ಅಂಗಡಿ, ರಾಜೇಂದ್ರ ಯಾದವಾಡ, ಶಾಂತಪ್ಪ ಹೂಗಾರ, ವಿಶ್ವೇಶ್ವರಯ್ಯ ಹಿರೇಮಠ, ಎಚ್ ಡಿ ದೇವಿಹೊಸೂರ, ವಿ ಎಸ್ ವಿಭೂತಿ, ಶಂಕರನಾರಾಯಣ ಹೆಗಡೆ, ಗೋಪಾಲಕೃಷ್ಣ ಹೆಗಡೆ, ಶ್ರೀಮತಿ. ವಿದ್ಯಾ, ಕೃಷ್ಣ, ರಮೇಶ ಬಾಬು, ಅಶೋಕ ಹರಲಾಪುರ, ರಮೇಶ ಬೆಳಗಾವಿ, ಜಿ ಎಂ ಶಾನಭಾಗ, ಶ್ರೀಧರ ಹಬೀಬ, ಎಲ್ ಎಂ ಕಿಣಗಿ ಮುಂತಾದ ಸದಸ್ಯರು ಹಾಜರಿದ್ದರು.