ನಾಗರಿಕರಿಗೆ ಕುಡಿಯುವ ನೀರಿಗಾಗಿ ಹಾಹಾಕಾರ

ಅಧಿಕಾರಿಗಳ ಬೇಜವಾಬ್ದಾರಿ ಪುರಸಭೆ ಆಡಳಿತ ನಿರ್ಲಕ್ಷ್ಯ
ಜೂಲೈ ೩೦ರಂದು ಪುರಸಭೆ ಕಛೇರಿಗೆ ಮುತ್ತಿಗೆ ಖಾದರ್ ಪಾಶ ಎಚ್ಚರಿಕೆ.!!
ಲಿಂಗಸೂಗೂರು,ಜು.೨೬-ಪುರಸಭೆ ವ್ಯಾಪ್ತಿಯಲ್ಲಿ ನಾಗರಿಕರಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಅಧಿಕಾರಿಗಳ ಬೇಜವಾಬ್ದಾರಿತನದಿಂದ ಪುರಸಭೆ ಆಡಳಿತ ನಿರ್ಲಕ್ಷ್ಯದಿಂದ ನಗರದಲ್ಲಿ ಜನರು ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲಾ ಕಾರಣ ಈಗಿರುವ ಪುರಸಭೆ ಮುಖ್ಯಾಧಿಕಾರಿ ಜಗನ್ನಾಥ ಜೋಷಿ ಇವರ ಆಡಳಿತ ದಿಂದ ಕುಡಿಯುವ ನೀರಿಗೆ ಬರ ಬಂದಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ನಾಗರಿಕರಿಗೆ ಕುಡಿಯುವ ನೀರು ಪೂರೈಕೆಗೆ ಮುಂದಾಗದಿದ್ದರೆ ಜುಲೈ ೩೦ರಂದು ಪುರಸಭೆ ಕಛೇರಿಗೆ ಮುತ್ತಿಗೆ ಹಾಕಲು ಮುಂದಾಗುತ್ತದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಖಾದರ್ ಪಾಶ ಇವರು ಸಂಜೆವಾಣಿ ವರದಿಗಾರರೊಂದಿಗೆ ಮಾತನಾಡಿ ಎಚ್ಚರಿಕೆ ನೀಡಿದ್ದಾರೆ.
ಲಿಂಗಸುಗೂರ ಪುರಸಭೆ ವ್ಯಾಪ್ತಿಯೆಲ್ಲಾ ವಾರ್ಡ್‌ಗಳಲ್ಲಿ ಕುಡಿಯುವ ನೀರಿಗೆ ಕಳೆದ ಒ೦ದು ವಾರದಿಂದ ಹಾಹಾಕಾರ ನಡೆದಿದ್ದು, ಕಾರಣ ಪುರಸಭೆ ಆಡಳಿತ ಬೇಜವಾಬ್ದಾರಿಯಿಂದ ಲಿಂಗಸುಗೂರ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸುಮಾರು ೩೦ ಎಕೆರೆಗಿಂತ ಹೆಚ್ಚು ವಿಶಾಲವಾದ ಕೆರೆಯು ಲಿಂಗಸುಗೂರು ಪಟ್ಟಣದ ೨೩ ವಾರ್ಡ್‌ಗಳಿಗೆ ೫೦.೦೦೦ ಸಾವಿರ ಕ್ಕಿಂತ ಹೆಚ್ಚು ಜನರು ವಾಸಿಸುವ ಜನರಿಗೆ ನೀರು ಸರಬರಾಜು ಮಾಡುತಿದ್ದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಕೆರೆ ಪುರಸಭೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಖಾಲಿಯಾಗಿದ್ದು, ಪಟ್ಟಣಕ್ಕೆ ಪೂರೈಸುವ ಕೃಷ್ಣಾ ನೀರು ಸಂಗ್ರಹದ ಕೆರೆ ಸಂಪೂರ್ಣ ಮುಂಜಾಗೃತ ಕ್ರಮ ವಹಿಸದ ಆಡಳಿತ ಅನುಭವಿಸವ ಪರಿಸ್ಥಿತಿ ನಿರ್ಮಾಣವಾಗಿದ್ದು, ಪುರಸಭೆಯ ಕಚೇರಿಯ ಅಧಿಕಾರಿಗಳು ಹಾಗೂ ಆಡಳಿತಕ್ಕೆ ಶಾಪಹಾಕುವಂತಾಗಿದೆ.
ಲಿಂಗಸುಗೂರ, ಪಟ್ಟಣ ಹಾಗೂ ಕರಡಕಲ್ ಕಸಬಾ ಲಿಂಗಸುಗೂರ ಹುಲಿಗುಡ್ಡ ಗ್ರಾಮಗಳಿಗೆ ಪುರಸಭೆ ನೀರು ಪೋರೈಸಲಾಗುತ್ತಿದ್ದು ಸದರಿ ನೀರು ಕಾಳಾಪೂರ ಸಮೀಪದ ಕೆರೆಯಲ್ಲಿ ಸಂಗ್ರಹವಾಗುತ್ತದೆ ನಾರಾಯಣಪೂರ ಜಲಾಶಯದಿಂದ ಕೃಷ್ಣಾನೀರು ಆರಂಭಕ್ಕೆ ಮುನ್ನ ನಾಲ್ಕು ತಿಂಗಳ ನೀರು ಸಂಗ್ರಹ ಖಾಲಿಯಾಗಿದ್ದು ನೀರು ಸಂಗ್ರಹದ ಬಗ್ಗೆ ಆಡಳಿತ ಯಾವುದೇ ಮುಂಜಾಗೃತ ವಹಿಸದರುವ ಕಾರಣ ಕೆರೆಯಲ್ಲಿ ೬ ಮೀಟರ ಸಂಗ್ರಹಿಸಿದ ನೀರು ದಿ.೨೬ ರಂದು ಆಲಮಟ್ಟಿಯಲ್ಲಿ ಐಸಿಸಿ ಸಭೆಯಲ್ಲಿ ನಾಲೆಗಳಿಗೆ ನೀರು ನಿರ್ಣಯವಾಗಲಿದ್ದು, ಮೂರುದಿನಗಳಲ್ಲಿ ಲಿಂಗಸುಗೂರ ಪುರಸಭೆಯ ನಿರ್ಮಿಸಿದ ಕಾಳಾಪುರ ಹತ್ತಿರದ ಕೆರೆಗೆ ನೀರು ಸಂಗ್ರಹವಾಗಲಿದೆ ಎಂದು ಕೆ ಬಿಜಿಎನ್‌ಎಲ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮಾಹಿತಿ ಕೇಳಿ ಬರುತ್ತಿವೆ .
ಲಿಂಗಸುಗೂರ ಪುರಸಭೆಯಿಂದ ನೀರು ಸರಬರಾಜು ಮಾಡುವ ಕೆರೆ ಖಾಲಿಯಾಗಿದ್ದನ್ನು ಮಾಜಿ ಅಧ್ಯಕ್ಷ ಖಾದರಬಾಷಾ ಪರಿಶೀಲನೆ ಮಾಡಿದರು.
ಪುರಸಭೆ ದಾಖಲೆ ಪ್ರಕಾರ ಪ್ರಸ್ತುತ ೬೮ ಬೋರವೆಲ್‌ಗಳಿದ್ದು ಅವುಗಳಲ್ಲಿ ಕೆಲವು ಮಾಯವಾಗಿದ್ದರೆ ಕೆಲವು ನಿಷ್ಕ್ರಿಯ ಸ್ಥಿತಿಯಲ್ಲಿ ಲಿಂಗಸುಗೂರು ಪುರಸಭೆ ವ್ಯಾಪ್ತಿಯಲ್ಲಿ ನಿತ್ಯ ಜನರಿಗೆ ೫೦ಲಕ್ಷ ಲೀಟರ ನೀರು ಅವಶ್ಯಕತೆ ಇದೆ.
ನಳ ಸಂಪರ್ಕದ ಸ್ಪಷ್ಟ ಮಾಹಿತಿ – ಕಳೆದ ಮೂರವರ್ಷಗಳಿಂದ ಇರುವುದಿಲ್ಲಾ ಹಾಗೂ ಹಿಂದೆ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆಗೆ ಸುಮಾರು ೨೫ಲಕ್ಷ ರೂ. ವೆಚ್ಚದಲ್ಲಿ ಹಲಾವಾರು ವಾರ್ಡಗಳಲ್ಲಿ ಬೊರವೆಲ್ ಪೈಪ್‌ಲೈನ್ ಮೂಲಕ ನೀರು ಪೂರೈಸುವುದು ಈಗ ಅದು ಸಂಪೂರ್ಣ ಸ್ಥಗಿತವಾಗಿದ್ದು, ಗುತ್ತಿಗೆದಾರರಿಗೆ ಸದಸ್ಯರಿಗೆ ಅಧಿಕಾರಿಗಳಿಗೆ ಮಾತ್ರ ಅನುಕೂಲವೆನ್ನಲಾಗುತ್ತಿದೆ ಪುರಸಭೆ ವ್ಯಾಪ್ತಿಯಲ್ಲಿ ೮ ದಿನಗಳಿಂದ ನೀರು ಪೂರೈಕೆ ಕೆಯಾಗದ ಕಾರಣ ಸಾರ್ವಜನಿಕರು ಕೆರೆಯಲ್ಲಿ ಮಣ್ಣು ಮಿಶ್ರಿತ ಹಾಗೂ ಹುಳದಿಂದ ಕೂಡಿದ ನೀರು ಬಿಡಲಾಗಿದೆ. ಮಳೆ ಗಾಲದಲ್ಲಿ ಮಣ್ಣು ಮಿಶ್ರಿತ ನೀರು ಹಾಗೂ ಹೊಂಡು ತುಂಬಿದ ನೀರು ಪೂರೈಕೆ ಮಾಡುವ ಮೂಲಕ ಮುಖ್ಯಾಧಿಕಾರಿಗಳು ಆಡಳಿತ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರು ಚಿಮಾರಿ ಹಾಕುತ್ತಿದ್ದಾರೆ.
ಲಿಂಗಸುಗೂರ ಪುರಸಭೆ ಬೇಜಬ್ದಾರಿ ಆಡಳಿತ ವ್ಯವಸ್ಥೆಯಿಂದ ಅಧಿಕಾರಿಗಳು ಕುಡಿಯುವ ನೀರಿನ ಬಗ್ಗೆ ನಿರ್ಲಕ್ಷ್ಯವಹಿಸಿದ್ದು ೩೦ ರೊಳಗೆ ನೀರು ಪೂರೈಸದಿದ್ದರೆ ನಾಗರಿಕರು ಪುರಸಭೆಗೆ ಮುತ್ತಿಗೆ ಹಾಕಬೇಕಾಗುತ್ತದೆ. ಪುರಸಭೆ ಆಡಳಿತ ಯಂತ್ರದ ವಿರುದ್ಧ ಖಾದರ್ ಪಾಶ ಆಕ್ರೋಶ ವ್ಯಕ್ತಪಡಿಸಿದ್ದಾರೆ.