
ಬೆಂಗಳೂರು, ಸೆ.೪-ಇಂದು ಸಮಾವೇಶಗೊಂಡಿದ್ದ ಕನ್ನಡ ಸಂಘರ್ಷ ಸಮಿತಿಯ ಸರ್ವಸದಸ್ಯರ ಸಭೆಯಲ್ಲಿ ಅಧ್ಯಕ್ಷರಾಗಿ ಎ.ಎಸ್. ನಾಗರಾಜಸ್ವಾಮಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ತಾ.ಸಿ. ತಿಮ್ಮಯ್ಯ ಅವರು ಮರು ಆಯ್ಕೆಗೊಂಡರು.
ಗೌರವಾಧ್ಯಕ್ಷರಾಗಿ ಶ್ರೀ ವೀರಭದ್ರಚನ್ನಮಲ್ಲ ಮಹಾಸ್ವಾಮೀಜಿ, ಸಂಸ್ಥಾಪಕ ಸದಸ್ಯರಾಗಿ ರಾಮಣ್ಣ ಎಚ್. ಕೋಡಿಹೊಸಹಳ್ಳಿ, ಕಾರ್ಯಾಧ್ಯಕ್ಷರಾಗಿ ಎಂ. ಪ್ರಕಾಶಮೂರ್ತಿ, ಉಪಾಧ್ಯಕ್ಷರಾಗಿ ಎಚ್. ಶಂಕರ್, ಡಾ. ಬಿ.ಸಿ. ರಾಜಕುಮಾರ್, ಕೋಶಾಧ್ಯಕ್ಷರಾಗಿ ಶಾಂತಲಾ ಸುರೇಶ್, ಕಾರ್ಯದರ್ಶಿಗಳಾಗಿ ಇಂದಿರಾ ಶರಣ್ ಜಮ್ಮಲದಿನ್ನಿ ಮತ್ತು ಬಿ.ಕೆ. ಸುಂದರೇಶ್, ಸಂಘಟನಾ ಕರ್ಯದರ್ಶಿಗಳಾಗಿ ಬಿ.ಸಿ.ಜಗದೀಶ್ ಮತ್ತು ಷಡಾಕ್ಷರಿ, ಸಂಚಾಲಕರಾಗಿ ಎಸ್. ಸದಾಶಿವಯ್ಯ ಮತ್ತು ಉದಾಂತ ಶಿವಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಿ.ಕೆ.ರಾಮೇಗೌಡ, ಕೆ. ಪುಟ್ಟಕಾಮಯ್ಯ, ಎಂ.ಜಿ. ದಯಾನಂದಕಟ್ಟೆ, ಆರ್. ವಿಠ್ಠಲ್ ಹಾಗೂ ಪ್ರಭು ಅವರು ಆಯ್ಕೆಯಾಗಿದ್ದಾರೆ.