ನಾಗರಹಾಳ : ವಿಮಾ ಪರಿಹಾರ ಚೆಕ್ ವಿತರಣೆ

ಮುದಗಲ್.ನ.08- ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯ ಪಟ್ಟಣ ಸಮೀಪದ ನಾಗರಹಾಳ ಗ್ರಾಮದ ಮೃತ ಬಸಮ್ಮರ ಮಗ ಶಿವಕುಮಾರ ರವರಿಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕರು ಗುರುವಾರ 2 ಲಕ್ಷ ಮೊತ್ತದ ಚೆಕ್ ವಿತರಣೆ ಮಾಡಿದರು.
ಈ ಯೋಜನೆಯ ಹಣವನ್ನು ಸರಿಯಾಗಿ ಪಾವತಿ ಮಾಡಿ ಸದುಪಯೋಗ ಮಾಡಿಕೊಳ್ಳಬೇಕು ಎಂದು ಬ್ಯಾಂಕ್ ವ್ಯವಸ್ಥಾಪಕರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬ್ಯಾಂಕ್ ವ್ಯವಸ್ಥಾಪಕ ಪುನೀತ ತಿವಾರಿ, ಬ್ಯಾಂಕ್ ಸಿಬ್ಬಂದಿ ಹನುಮೇಶ ಪಾಟೀಲ್, ಕಾಶೀಮಸಾಬ, ಗೋಪಾಲ್, ವಿನೋದ ಆಂಜನೇಯ ಸೇರಿದಂತೆ ಮುಂತಾದವರು ಇದ್ದರು.