ನಾಗರಹಾಳ ಗ್ರಾ.ಪಂ. ರೋಜಗಾರ ದಿವಸ ಆಚರಣೆ

ಲಿಂಗಸುಗೂರು,ಸೆ.೦೭- ಲಿಂಗಸುಗೂರು ತಾಲೂಕಿನ ನಾಗರಾಳ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ರೋಜಗಾರ ದಿವಸ ಆಚರಣೆ ಮಾಡಲಾಯಿತು.
ಗ್ರಾಮದ ಕೂಲಿ ಕಾರರು ಸಂಘದ ಮಹಿಳೆಯರು ಈ ಸಭೆಯಲ್ಲಿ ಭಾಗವಹಿಸಿದ್ದರು. ಬಸವರಾಜ bಜಿಣ ರವರು ಸಭೆಗೆ ಸ್ವಾಗತಿಸಿದರು. ಬಾಲಪ್ಪ ತಾಲೂಕು ಐ.ಇ.ಸಿ. ಸಂಯೋಜಕರು ನರೇಗಾ ಯೋಜನೆಯ ಕುರಿತು ಸವಿಸ್ತಾರವಾಗಿ ಕೂಲಿಕಾರರಿಗೆ ಹಾಗೂ ಗ್ರಾಮದ ಜನರಿಗೆ ಸ್ವ ಸಹಾಯ ಸಂಘದ ಮಹಿಳೆಯರಿಗೆ ಮಾಹಿತಿಯನ್ನು ತಿಳಿಸಲಾಹಿತು. ಪ್ರತಿಯೊಬ್ಬರಿಗೆ ನರೇಗಾ ದಿಂದ ಸಿಗುವಂತ ಸೌಲಭ್ಯ ಗಳ ಕುರಿತು ತಿಳಿಸಲಾಹಿತು ಅದೇ ರೀತಿ ಪ್ರತಿಯೊಬ್ಬರಿಗೂ ಒಂದು ಜಾಬ್ ಕಾರ್ಡ ದಿಂದ ೧೦೦ ಮಾನವ ದಿನಗಳನ್ನು ಹಾಗೂ ವಯಕ್ತಿಕ ಕಾಮಗಾರಿಗಳನ್ನು ಮಾಡಿಕೊಳ್ಳಲು ತಿಳಿಸಲಾಯಿತು.
ಯೋಜನೆಯಲ್ಲಿ ಪ್ರತಿಯೊಂದು ಮನೆಯವರು ಈ ಯೋಜನೆಯಲ್ಲಿ ಬಾಗಿದರಾಗಿರಬೇಕು, ಸಂಜೀವಿನಿ ಯೋಜನೆಯ ಮಳೆಯರಿಗೆ ಸಾಲ ಕೊಡುವಾದಾಯಿತು ಸ್ವಯಂ ಉದ್ಯೋಗ, ಮಹಿಳೆಯರು ಆರ್ಥಿಕತೆ ಸದೃಢ ರಾಗಬೇಕು ಎಂದು ಸವಿಸ್ತಾರವಾಗಿ ಮಾಹಿತಿಯನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಗೌರಮ್ಮ .ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು. ಗಡ್ದೆಪ್ಪ ಬಸವರಾಜ ಗ್ರಾಮ ಪಂಚಾಯತ್ ಸದಸ್ಯರು, ಸ್ವ ಸಹಾಯ ಸಂಘದ ಸದಸ್ಯರು, ನರೇಗಾ ಮೇಟ್ಸ ,ಕೂಲಿಕಾರರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.