ನಾಗರಹಳ್ಳಿಯಲ್ಲಿ ಕನ್ನಡ ಧ್ವಜಾರೋಹಣ

ಗಂಗಾವತಿ ನ.21: ಕನ್ನಡ ರಾಜ್ಯೋತ್ಸವದ ಮಾಸಾಚರಣೆಯ ನಿಮಿತ್ತ ತಾಲೂಕಿನ ಚಿಕ್ಕಜಂತಕಲ್ ಗ್ರಾ.ಪಂ. ವ್ಯಾಪ್ತಿಯ ನಾಗರಹಳ್ಳಿ ಗ್ರಾಮದಲ್ಲಿ ಕನ್ನಡಸೇನೆ ಸಂಘಟನೆಯಿಂದ ರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕನ್ನಡಸೇನೆಯ ಕೊಪ್ಪಳ ಜಿಲ್ಲಾಧ್ಯಕ್ಷ ಚನ್ನಬಸವ ಜೇಕಿನ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಆಂಜನೇಯ ವಡ್ಡರಹಟ್ಟಿ, ಗಂಗಣ್ಣ, ಪರಶುರಾಮ, ಗ್ರಾಮದ ಮುಖಂಡರಾದ ಹುಲುಗಪ್ಪ ವಕೀಲರು, ಜಿ.ಪಂ. ಮಾಜಿ ಸದಸ್ಯ ಪರಶುರಾಮಪ್ಪ, ಗ್ರಾ.ಪಂ.ಮಾಜಿ ಸದಸ್ಯ ಬಿ.ಎನ್.ಬಾಷಾ, ಆಟೋ ಶೀಲವಂತಪ್ಪ, ವಿರುಪಣ್ಣ ಹೊಸಕೇರಿ, ಓಂಕಾರೆಪ್ಪ, ಕೃಷ್ಣ, ಬಂಗಿ ಯಂಕೋಬಪ್ಪ, ಹುಲುಗಪ್ಪ, ಮಂಜುನಾಥ ಉಪಸ್ಥಿತರಿದ್ದರು.