ನಾಗರಪಂಚಮಿ: ಉಡಿ ತುಂಬುವ ಕಾರ್ಯಕ್ರಮ

ಕಲಬುರಗಿ ಆ 3:ತಾಲೂಕಿನ ಶರಣ ಸಿರಸಗಿ ಗ್ರಾಮದ ನಾಗಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀನಾಗಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಹಾಗೂ ಬಿಲಗುಂದಿ ಫೌಂಡೇಶನ್ ವತಿಯಿಂದ ನಾಗರ ಪಂಚಮಿ ಹಬ್ಬದ ನಿಮಿತ್ತ 250 ಮುತ್ತೈದರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ಸಂತೋಷ ಬಿಲಗುಂದಿ, ಶರಣು ಅಲ್ಲಮಪ್ರಭು ಪಾಟೀಲ, ದೇವಸ್ಥಾನದ ಅಧ್ಯಕ್ಷ ಪರಮೇಶ್ವರ ರಾಯಪ್ಪ ಕಣ್ಣಿ, ವಿಶ್ವನಾಥ ಪಾಟೀಲ, ಶಿವಮೂರ್ತಿ ನಡಗೇರ, ಬಸವರಾಜ ರಾವೂರ, ಸೂರ್ಯಕಾಂತ ಕಣ್ಣಿ, ಜಗದೇವಪ್ಪ ಕಣ್ಣಿ, ಸೊಮಣ್ಣ ಕಣ್ಣಿ, ಶಿವಲಿಂಗಪ್ಪ ಕಣ್ಣಿ, ರಮೇಶ ವಗ್ಗಿ, ಶಿವಯೋಗಿ ಹೋಸಮನಿ, ಶಿವಾನಂದ ಹೂಗಾರ ಕಣ್ಣಿ, ಶರಣು ಭಾವಿಕಟ್ಟಿ, ವೀರಭದ್ರಯ ಸ್ವಾಮಿ, ಬಸವರಾಜ ಬುದೆಡಳ್ಳ, ರಮೇಶ ನಾಟೆಕಾರ, ರಮೇಶ ಚವ್ಹಾಣ, ಮಹೇಂದ್ರ ಕೋಳೂರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.