ನಾಗಯಿದಲಾಯಿ ಕೆರೆಯಲ್ಲಿ ಬಿರುಕು: ಜೆಡಿಎಸ್ ಪ್ರತಿಭಟನೆ

ಚಿಂಚೋಳಿ,ಆ.4- ತಾಲೂಕಿನ ನಾಗಯಿದಲಾಯಿ ಗ್ರಾಮದ ಕೆರೆ ಕಾಮಗಾರಿ ಕಳಪೆ ಮಟ್ಟದ ಆಗಿದ್ದು, ಕೆರೆಗೊಡೆಯಲ್ಲಿ ಕಾಣಿಸಿಕೊಂಡಿರುವ ಬಿರುಕೆ ಸಾಕ್ಷಿಯಾಗಿದೆ. ಈ ಮೊದಲು ಇಲ್ಲಿನ ಕೆರೆ ಹೊಡೆದು ಗ್ರಾಮಸ್ಥರಿಗೆ ಮತ್ತು ಸುತ್ತಲಿನ ಜಮಿನುಗಳಿಗೆ ಹಾನಿಯನ್ನುಂಟು ಮಾಡಿತ್ತು ಪುನಃ ಹೊಡೆಯುವ ಸಾಧ್ಯತೆ ಇದ್ದು ಇದರಿಂದ ಗ್ರಾಮಸ್ಥರು ಭಯಭೀತಿಯಲ್ಲಿದ್ದಾರೆ.
ಕಳಪೆ ಕಾಮಗಾರಿ ಖಂಡಿಸಿ ಹಾಗೂ ಕೆರೆಯಲ್ಲಿ ಕಾಣಿಸಿಕೊಂಡ ಬಿರುಕು, ಗುತ್ತಿಗೆದಾರರ ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಜೆಡಿಎಸ್ ಪಕ್ಷದಿಂದ ನಾಗಯಿದಲಾಯಿ ಗ್ರಾಮದ ಮುಖ್ಯ ರಸ್ತೆ ತಡೆದು ಬೃಹತ್ ಪ್ರತಿಭಟನೆ ಕೈಗೊಳ್ಳಲಾಯಿತು.
ಪ್ರತಿಭಟನೆ ಉದ್ದೇಶಿಸಿ ಜೆಡಿಎಸ್ ಪಕ್ಷದ ಮುಖಂಡರಾದ ಸಂಜೀವನ್ ಆರ್ ಯಾಕಾಪೂರ, ಅವರು ಮಾತನಾಡಿ ನಾಗಯಿದಲಾಯಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ರೈತರಿಗೆ ಅನುಕೂಲವಾಗಲಿ ಎಂದು ನಿರ್ಮಿಸಿದ ಕೆರೆಗಳ ಕಾಮಗಾರಿಗಳು ಕಳಪೆಯಾಗಿವೆ.
ನಾಗಯಿದಲಾಯಿ, ಹೂಡದಳ್ಳಿ, ದೋಟಿಕೋಳ್, ಗ್ರಾಮಗಳಲ್ಲಿ ಸಣ್ಣನೀರಾವರಿ ಕೆರೆಯು ಕಳೆದ 2 ವರ್ಷಗಳ ಹಿಂದೆ ರಾತ್ರೋ ರಾತ್ರಿ ಒಡೆದು ತಳಪಾತ್ರದ ರೈತರ ಜಮೀನುಗಳಿಗೆ ಭಾರಿ ನಷ್ಟವನ್ನು0ಟು ಮಾಡಿದ್ದವು ಹಾನಿಗೊಳಗಾದ ಸಂತ್ರಸ್ಥರಿಗೆ ಇಲ್ಲಿಯವರೆಗೂ ಪರಿಹಾರ ನೀಡಿಲ್ಲ ಅಲ್ಲದೇ ಇದೇ 2022 ರ ಮಾರ್ಚ ತಿಂಗಳಿನಲ್ಲಿ ನಾಗಾಯಿದಲಾಯಿ ಸಣ್ಣನೀರಾವರಿ ಇಲಾಖೆಯಿಂದ ಸುಮಾರು 4 ಕೋಟಿ 32 ಲಕ್ಷ ರೂಗಳು ಬಿಡುಗಡೆಯಾಗಿ ಕಳಪೆ ಕಾಮಗಾರಿ ಮಾಡಲಾಗಿದೆ, ಶಾಸಕರು ಮತ್ತು ಗುತ್ತಿಗೆದಾರರು ಹಾಗೂ ತಾಂತ್ರಿಕ ಅಧಿಕಾರಿಗಳ ನಿರ್ಲಕ್ಷತನದಿಂದ ಈಗಾಗಲೇ ನಿರ್ಮಾಣವಾದ ಕೆರೆಯ ಪ್ರದೇಶವು ಸಂಪೂರ್ಣ ಕುಸಿದಿದೆ, ಅಷ್ಟೇ ಅಲ್ಲದೆ ಈ ಕೆರೆ ಮತ್ತೊಮ್ಮೆ ಒಡೆಯುವ ಆತಂಕ ಸೃಷ್ಟಿಸಿದೆ.
ಇದರಿಂದ ನಾಗಯಿದಲಾಯಿ, ಪಟಪಳ್ಳಿ, ಡದೇಗಲ್ಮಡಿ, ಗ್ರಾಮಗಳ ಜನರು ಮತ್ತು ರೈತರು ತೀವ್ರ ಸಂಕಷ್ಟ ಎದುರಿಸಬೇಕಾಗಿದೆ ಕಳಪೆ ಕಾಮಗಾರಿ ಮಾಡಿ ದುಡ್ಡು ಹೊಡೆದ ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಮುಖದ ಮೇಲೆ ಕಲಿಸಬೇಕು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕೂಡ ಕ್ರಮ ತೆಗೆದುಕೊಳ್ಳಬೇಕು. ಈ ಕೆರೆಯ ನೀರಿಗೆ ಸಿಲುಕಿ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಹಾಗೂ ಸಾರ್ವಜನಿಕರಿಗೆ ಶಾಶ್ವತ ಪರಿಹಾರ ಮಾಡಿಕೊಡ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಅಧ್ಯಕ್ಷರಾದ ಸೈಯ್ಯದ್ ನಿಯಾಜ್ ಅಲಿ, ವಿಶ್ವನಾಥ್ ಪಾಟೀಲ,ರಘು ದೇಸಾಯಿ ದೇಗಲ್ಮಡಿ, ಹಣಮಂತ ರೆಡ್ಡಿ ದೋಟಿಕೋಳ್, ಜೆಡಿಎಸ್ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ರಾಹುಲ ಸಂಜೀವನ್ ಯಾಕಾಪೂರ, ಶೇರ್ ಖಾನ್ ಪಠಾಣ, ವೀರರೆಡ್ಡಿ ನಾಗಯಿದಲಾಯಿ,ಬಸವಂತ ರೆಡ್ಡಿ ಚಂಗೋಲ್, ವೀರಾರೆಡ್ಡಿ ಚಟ್ನಳ್ಳಿ ತುಮಕುಂಟಾ,ನೀಲಕಂಠ ಹುಡಗಿ ಐನೋಳ್ಳಿ, ಸುಶೀಲ್ ಮೇತ್ರಿ, ಹಣಮಂತ ಗಡ್ಡಿಮನಿ ಐನೋಳ್ಳಿ,ಸುದರ್ಶನ್ ರೆಡ್ಡಿ,ರೌಫ್ ಪÀಟೇಲ್, ಯಶ್ವ0ತ್ ಕಲ್ಲೂರ್, ನೀಲಕಂಠ ಕೆ, ಕೆ,ಅರವಿಂದ್ ದೇಗಲ್ಮಡಿ,ವೆಂಕಟ್ ಜಾಧವ, ಧನರಾಜ್ ಪಾಟೀಲ್,ಕೇದಾರನಾಥ್ ಸಿಂಧೂಲ್, ಪಾಂಡುರಂಗ, ಕೈಲಾಸ ಮೇಲಿನಕೇರಿ, ಸೂರ್ಯಕಾಂತ್ ಪೂಜಾರಿ, ಗೌಸ್ ಪಟೇಲ್, ಆಕಾಶ್ ಬೆಡರ್, ಮತಾಬ್, ಶಿವರಾಜ್, ಶ್ರೀನಿವಾಸ್, ಖದಿರ್ ಸಾಬ್, ವೀರಶೆಟ್ಟಿ, ನೈಯುಮ್ ಜಮಾದಾರ, ಅಝರ್ ಪಟೇಲ್, ಲಕ್ಷ್ಮಣ್ ಆವಂಟಿ,ಸಿಲಾರ್ ಸಾಬ್,ರಾಯಪ್ಪ ಬೆನಕೆಪಳ್ಳಿ, ಮಹೇಬೂಬ್ ಕುಸರಂಪಳ್ಳಿ, ವೀರಯ್ಯ ಗೌಡ್ಸ್ ಕಲ್ಲೂರ್, ಮತ್ತು ಅನೇಕ ಗ್ರಾಮದ ರೈತರು ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಇದ್ದರು