ನಾಗಮಾರಪಳ್ಳಿ ಫೌಂಡೇಶನ್‍ನಿಂದ ನೀರು ಪೂರೈಕೆ

ಬೀದರ್: ಮಾ.15:ನಗರದ ವಿವಿಧ ಬಡಾವಣೆಗಳಲ್ಲಿ ಉಂಟಾಗಿರುವ ಕುಡಿಯುವ ನೀರಿನ ಅಭಾವದ ಸಮಸ್ಯೆಗೆ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ಸ್ಪಂದಿಸಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಕೆ ವ್ಯವಸ್ಥೆ ಮಾಡಿದೆ.

ನಗರದ ಚಿಕಪೇಟ್, ಅಬ್ದುಲ್ ಫೈಜ್ ದರ್ಗಾ, ವಡ್ಡರ್ ಕಾಲೋನಿ, ಹಳೆಯ ಮೈಲೂರು, ಸಾಯಿ ನಗರ, ಮಾಮನಕೇರಿ, ಹಮೀಲಾಪುರ, ಹನುಮಾನ ನಗರ, ತಾಜಲಾಪುರ, ಮೀರಾಗಂಜ್ ಮುಂತಾದ ಬಡಾವಣೆಗಳಲ್ಲಿ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಫೌಂಡೇಶನ್ ಅಧ್ಯಕ್ಷರೂ ಆಗಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ್ ನಾಗಮಾರಪಳ್ಳಿ ತಿಳಿಸಿದ್ದಾರೆ.

ಬಿಸಿಲು ಹೆಚ್ಚುತ್ತಿದ್ದಂತೆಯೇ ನೀರಿನ ಸಮಸ್ಯೆಯೂ ಕಾಡುತ್ತಿದೆ. ನಾಗಮಾರಪಳ್ಳಿ ಫೌಂಡೇಶನ್ ಆರಂಭದಿಂದಲೂ ಜನರ ಸಮಸ್ಯೆಗೆ ಸ್ಪಂದಿಸುತ್ತ ಬಂದಿದೆ. ಈಗಾಗಲೇ ಹಲವು ಬಡಾವಣೆಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಫೌಂಡೇಶನ್ ಜನಪರ ಕಾರ್ಯಗಳು ಮುಂದುವರೆಯಲಿವೆ ಎಂದು ಸೂರ್ಯಕಾಂತ್ ತಿಳಿಸಿದ್ದಾರೆ.