ನಾಗಮಾರಪಳ್ಳಿ ಫೌಂಡೇಶನ್‍ದಿಂದ ಉಚಿತ ನೀರಿನ ಸೇವೆ

ಬೀದರ,ಫೆ 25: ನಗರದ ವಡ್ಡರ್ ಕಾಲೋನಿ,ವಿದ್ಯಾನಗರ,ಚಿಕ್ಪೇಟ್ ಹಾಗೂ ಅಬ್ದುಲ್ ಫೈಜ್ ದರ್ಗಾ ಪ್ರದೇಶದಲ್ಲಿಬೇಸಿಗೆಯ ಆರಂಭಿಕ ಪ್ರಭಾವದಿಂದ ತುಂಬಾ ನೀರಿನ ಸಮಸ್ಯೆ ಉಂಟಾಗಿದ್ದು ಡಾ. ಗುರುಪಾದಪ್ಪನಾಗಮಾರಪಳ್ಳಿ ಫೌಂಡೇಶನ್ ವತಿಯಿಂದ ಉಚಿತ ನೀರಿನ ಸೇವೆ ಒದಗಿಸಲಾಗುತ್ತಿದೆ.
ಜನಮೆಚ್ಚಿದ ನಾಯಕ ಸೂರ್ಯಕಾಂತ ಗುರುಪಾದಪ್ಪ ನಾಗಮಾರಪಳ್ಳಿ ಅವರ ಮಾರ್ಗದರ್ಶನದಲ್ಲಿ ಟ್ಯಾಂಕರ್ ಮೂಲಕ ನೀರನ್ನುಪೂರೈಸಲಾಗುತ್ತಿದೆ.ಅಲ್ಲಿನ ನಿವಾಸಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವುದರೊಂದಿಗೆನೀರಿನ ಪೂರೈಕೆಯ ಸೇವೆಯನ್ನ ಶ್ಲಾಘಿಸಿದ್ದಾರೆ,ಹಾಗೂ ಕೃತಜ್ಞತೆಗಳನ್ನ ಸಲ್ಲಿಸಿದ್ದಾರೆ.