ನಾಗಮಾರಪಳ್ಳಿ ಆಸ್ಪತ್ರೆಯಲ್ಲಿ ಮಹಿಳಾ ದಿನಾಚರಣೆ: ಸೀರೆ ವಿತರಣೆ

ಬೀದರ್: ಮಾ.9:ಡಾ.ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ ವತಿಯಿಂದ ನಿನ್ನೆ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಆಸ್ಪತ್ರೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಯುವ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ
ಸೂರ್ಯಕಾಂತ ನಾಗಮಾರಪಳ್ಳಿ ಅವರ ಪರವಾಗಿ ಮಹಿಳೆಯರಿಗೆ ಸೀರೆ ಮತ್ತು ಹೊದಿಕೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಹಿತಿ
ವಿಜಯಲಕ್ಷ್ಮಿ ಕೌವಟಗೆ ಮಾತನಾಡಿ, ಮಹಿಳೆಯರು ಸಶಕ್ತರಾಗಬೇಕು ಮತ್ತು ಸಮಾಜ ಮುಖಿಯಾಗಿ ಬಾಳಿ ಸಮಾಜದ ಒಳಿತಿಗಾಗಿ ಬಾಳಬೇಕು ಎಂದರು ದಿ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಅವರು ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸಲು 1996ರಲ್ಲಿ 13 ಮಹಿಳೆಯರಿಗೆ ರೂ.70000 ಸಾಲ ನೀಡಿದ ಈ ಕಾರ್ಯ ಇಂದು 1,70,000 ಅಧಿಕ ಮಹಿಳಾ ಗುಂಪಗಳು ಮೂಲಕ 507ಕೋಟಿ ಸಾಲ ನೀಡಿ ದೇಶದಲ್ಲಿ ಮಾದರಿಯಾಗಿದ್ದಾರೆ ಎಂದು ನೆನೆಸಿದರು.
ಈ ಸಂದರ್ಭದಲ್ಲಿ ಮುಖಂಡರಾದ
ಬಾಬುರಾವ ದಾನಿ ಮತ್ತು
ಪುಷ್ಪಕಕುಮಾರ ಜಾಧವ ಇನ್ನಿತರರು ಉಪಸ್ಥಿತರಿದ್ದರು.