ನಾಗಮಂಗಲ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ

ನಾಗಮಂಗಲ: ಮೇ.27: ತಾಲ್ಲೂಕಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾರದಲ್ಲಿ ಎರಡು ದಿನ ಮಾತ್ರ ದಿನಸಿ, ತರಕಾರಿ ಮತ್ತು ಹಣ್ಣು ಖರೀದಿಗೆ ಜಿಲ್ಲಾಡಳಿತ ಅವಕಾಶ ನೀಡಿದೆ.
ಗುರುವಾರ ಬೆಳಿಗ್ಗೆ ಮಾರುಕಟ್ಟೆಯಲ್ಲಿ ತರಕಾರಿ, ದಿನಸಿ ಅಂಗಡಿಗಳ ಮುಂದೆ ಜನ ಮುಗಿಬಿದ್ದು ಖರೀದಿಸಿದರು. ದೈಹಿಕ ಅಂತರವಿಲ್ಲದೇ ಯಾವ ಭಯವೂ ಇಲ್ಲದೆ ಒಬ್ಬರ ಮೇಲೆ ಒಬ್ಬರು ಬಿದ್ದು ಖರೀದಿಗೆ ಮುಂದಾದ ದೃಶ್ಯ ಕಂಡುಬಂತು.
ಕೋವಿಡ್ ನಿಯಮ ಪಾಲಿಸುವಂತೆ ಪೆÇಲೀಸರು ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ನಿಯಮಗಳನ್ನು ಗಾಳಿಗೆ ತೂರಿ ಮಾರುಕಟ್ಟೆಯಲ್ಲಿ ಜನ ಜಮಾವಣೆಗೊಂಡಿದ್ದರು. ಪ್ರತಿನಿತ್ಯ ದಿನಸಿ ಮತ್ತು ತರಕಾರಿ, ಹಣ್ಣು ಖರೀದಿಗೆ ಅವಕಾಶ ನೀಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಜಿಲ್ಲಾಡಳಿತದ ಕ್ರಮ ಸರಿಯಲ್ಲ ಎಂದು ಗ್ರಾಹಕ ಲೋಕೇಶ್ ಅಭಿಪ್ರಾಯಪಟ್ಟರು.