ನಾಗಪ್ಪ ಸಾಮಾಜಿಕ ಕಾರ್ಯ ಅಪಾರ

ರಾಯಚೂರು, ಏ.೦೨- ಸರಳ ಸಜ್ಜನಿಕೆ ಜನಪರ ಕಾಳಜಿವುಳ್ಳ ಡಾ.ಎಂ ನಾಗಪ್ಪ ವಕೀಲರು ನೊಂದವರ ದನಿಯಾಗಿ ಸಮಾಜ ಸೇವೆಗೆ ತಮ್ಮ ಜೀವನವನ್ನೇ ಮುಡಿಪು ಇಟ್ಟ ಸಮಾಜವಾದಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಹೇಳಿದರು. ಅವರಿಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಡಾ.ಎಂ.ನಾಗಪ್ಪ ವಕೀಲರು ಪ್ರತಿಷ್ಠಾನದ ೧೯ ನೇ ವಾರ್ಷಿಕೋತ್ಸವ, ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಹಾಗೂ ಡಾ.ಎಂ.ನಾಗಪ್ಪ ವಕೀಲರ ೧೨ ನೇ ಪುಣ್ಯ ಸ್ಮರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಡಾ. ಎಂ ನಾಗಪ್ಪ ವಕೀಲರು ೧೯೯೬ ರಲ್ಲಿ ಶಾಸಕರಾದ ಸಂದರ್ಭದಲ್ಲಿ ತಮ್ಮ ವಕೀಲ ವೃತ್ತಿಯನ್ನು ಬಿಡದೇ ವಿಧಾನಸಭೆಯಲ್ಲಿ ನೊಂದವರ ಪರ ದ್ವನಿಯತ್ತಿದ ಶ್ರೇಷ್ಠ ರಾಜಕಾರಣಿ ಎಂದರು.ಅವರ ಬದುಕಿನ ಉದ್ದಕ್ಕೂ ಸಮಾಜ ಸೇವೆಯಲ್ಲಿ ನಿರತರಾಗಿದ್ದರು.
ಅನೇಕ ವಿಚಾರಧಾರೆಗಳನ್ನು ಒಳಗೊಂಡ ಅವರ ಸಾಮಾಜಿಕ ಒಡನಾಟ ಅಪಾರವಾಗಿತ್ತು.
ಹಿಂದಿನ ಕಾಲಘಟದಲ್ಲಿ ರಾಜಕಾರಣಿಗಳು ಸಮಾಜ ಸೇವೆಗಿಂತ ಭ್ರಷ್ಟಾಚಾರದಲ್ಲಿ ಹೆಚ್ಚಾಗಿ ತೊಡಗಿದ್ದಾರೆ. ಆದರೆ ಡಾ.ಎಂ ನಾಗಪ್ಪ ವಕೀಲರು ಹಣಕ್ಕಾಗಿ ಆಸೆ ಪಡದೇ, ತಾರತಮ್ಯ ಮಾಡದೇ ಸಮಾಜದ ಉನ್ನತಿ, ಸರ್ವಜನ ಹಿತಕ್ಕೆ ಶ್ರಮಿಸಿದವರು ಎಂದು ತಿಳಿಸಿದರು.ಡಾ.ಎಂ ನಾಗಪ್ಪ ಅವರ ಶಿಕ್ಷಣ ಪ್ರೇಮ ಗಮನಾರ್ಹ. ಅವರು ಕೈಗೊಂಡ ಸಮಾಜಮುಖಿ ಕಾರ್ಯ ಇಂದಿಗೂ ಅವರನ್ನು ಜೀವಂತವಾಗಿರಿಸಿವೆ. ಅವರ ಆಶಯಗಳನ್ನು ಶಿಷ್ಯ ಬಳಗ ಪ್ರತಿಷ್ಠಾನ ಮೂಲಕ ಮಾಡುತ್ತಿದೆ ಎಂದು ಹೇಳಿದರು.
ತುತ್ತು ಅನ್ನಕ್ಕಾಗಿ ಅಲೆದಾಡಿದ ವ್ಯಕ್ತಿಯಿಂದ ಮಾತ್ರ ಸಮಾಜ ಅಭಿವೃದ್ಧಿಯಾಗಲು ಸಾಧ್ಯ ಎಂದರು.
ನೊಂದವರ ಏಳೆಗೆ ಜೀವನ ಮುಡಿಪು ಇಟ್ಟ ಸಮಾಜವಾದಿ ತತ್ವದ ಡಾ.ಎಂ ನಾಗಪ್ಪ ವಕೀಲರು. ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಲಾಲ್ ಬಹದ್ದೂರ ಶಾಸ್ತ್ರೀ ಅಲಹಾಬಾದ್‌ನಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿದ ದಿನವೇ ಕಾಕತಾಳೀಯ ಎಂಬಂತೆ ರಾಯಚೂರಿನಲ್ಲಿ ಅದೇ ದಿನ ಜೋಡು ಎದೆಗುಂಡಿಗೆಯ ಸ್ವಾತಂತ್ರ್ಯ ಹೋರಾಟಗಾರ ಡಾ.ನಾಗಪ್ಪ ಅವರು ರಾಷ್ಟ್ರಧ್ವಜಾರೋಹಣ ಮಾಡಿದರು.
ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ನಾಗಪ್ಪ ವಕೀಲರು ಪ್ರಾಸ್ತವಿಕ ಮಾತನಾಡಿದರು.
ರಾಯಚೂರವಾಣಿ ಪತ್ರಿಕೆಯ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನವನ್ನು ಸಂಪಾದಕ ಅರವಿಂದ ಕುಲಕರ್ಣಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಎಂ.ಬಸಪ್ಪ ತಿಪಾರೆಡ್ಡಿ,, ಡಾ.ಸಿ.ಬಿ.ಚಿಲ್ಕರಾಗಿ, ಡಾ. ಎಂ. ನಾಗಪ್ಪ ವಕೀಲರು
ಪ್ರತಿಷ್ಠಾನದ ಕಾರ್ಯ ಸಮತಿ ಮತ್ತು ಸರ್ವ ಸದಸ್ಯರು ಸೇರಿದಂತೆ ಉಪಸ್ಥಿತರಿದ್ದರು.