ನಾಗನಳ್ಳಿ ಕ್ವಾರಾಂಟೈನ್ ಕೇಂದ್ರಕ್ಕೆ ಸಂಸದ ಡಾ. ಜಾಧವ್ ಭೇಟಿ

ಕಲಬುರಗಿ:ನಗರದ ನಾಗನಳ್ಳಿಯ ಕೋವಿಡ್ ಕ್ವಾರಾಂಟೈನ್ ಕೇಂದ್ರಕ್ಕೆ ಭೇಟಿ ನೀಡಿದ ಸಂಸದ ಡಾ. ಉಮೇಶ್ ಜಾಧವ್ ಅವರು, ಕೊರೋನಾ ವೈರಸ್ ಸೋಂಕಿತರ (ರೋಗಲಕ್ಷಣ ಇಲ್ಲದವರು) ಯೋಗ-ಕ್ಷೇಮ ವಿಚಾರಿಸಿದರು.
ಈ ಸಂದರ್ಭದಲ್ಲಿ ರೋಗಿಗಳು ತಮ್ಮ ವಿವಿಧ ಸಮಸ್ಯೆಗಳನ್ನು ಹೇಳಿಕೊಂಡರು.
ತಕ್ಷಣವೇ ಸಂಸದರು ದೂರವಾಣಿ ಮೂಲಕ ಕಲಬುರಗಿ ಸಹಾಯಕ ಆಯುಕ್ತ ರಾಮಚಂದ್ರ ಗಡಾದೆ, ಜಿಲ್ಲಾ ಆರೋಗ್ಯಾಧಿಕಾರಿ ರಾಜಕುಮಾರ್ ಮಾಳಿ, ಪೊಲೀಸ್ ಸರ್ಕಲ್ ಇನ್ಸ್ ಸ್ಪೆಕ್ಟರ್ ಹಿರೇಮಠ್ ಅವರಿಗೆ ಸೂಚಿಸಿದರು. ಕೂಡಲೇ ಕ್ವಾರಾಂಟೈನ್ ಕೇಂದ್ರಕ್ಜೆ ಆಗಮಿಸಿದ ಅಧಿಕಾರಿಗಳು, ವಿಟಮಿನ್ ಮಾತ್ರೆಗಳು, ಮಾಸ್ಕ್ ಮುಂತಾದ
ಅಗತ್ಯ ವ್ಯವಸ್ಥೆ ಕಲ್ಪಿಸಿದರು.
ಸಂಸದರ ಸೂಚನೆ ಮೇರೆಗೆ ಪೌರಕಾರ್ಮಿಕ ಸಿಬ್ಬಂದಿ ಕೂಡ ಕೇಂದ್ರದಲ್ಲಿ ಸ್ವಚ್ಛತಾ ಕಾರ್ಯ ಮಾಡಿದರು.