ನಾಗದೇವರಿಗೆ ಹಾಲೆರೆದ ಮಹಿಳೆಯರು.

ಸಂಜೆವಾಣಿ ವಾರ್ತೆಹೊಸಪೇಟೆ ಆ20: ಶ್ರಾವಣ ಬಂತೆಂದರೆ ಸಾಕು ಸಾಲು ಸಾಲು ಹಬ್ಬಗಳ ಸಂಭ್ರಮ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಆರಂಭವಾಗುತ್ತದೆ, ಅಂತಯೇ ಮೊದಲ ಹಬ್ಬವಾಗಿ ನಾಗರ ಚತುರ್ಥೀಯನ್ನು ಮಹಿಳೆಯರು ಶ್ರದ್ಧಾಭಕ್ತಿ ಸಂಭ್ರಮದಿಂದ ಆಚರಿಸಿದರು.ನಾಗ ಚತುರ್ಥೀ ಪ್ರಯುಕ್ತ ಮಹಿಳೆಯರು ಜಿಲ್ಲೆಯಾದ್ಯಂತ ನಾಗರ ಕಟ್ಟೆಗಳಿಗೆ ತೆರಳಿ ನಾಗದೇವರಿಗೆ ವಿಶೇಷ ಪೂಜೆ, ವೈವಿದ್ಯಮಯ ಪುಪ್ಪಗಳೊಂದಿಗೆ ಅಲಂಕಾರ ಮಾಡಿ ವೈವಿದ್ಯಯ ಖಾದ್ಯಗಳಿಂದ ತಯಾರಿಸಿದ ವಿವಿಧ ಊಂಡೆಗಳನ್ನು ಅರ್ಪಿಸಿ ಬೆಲ್ಲ ನೀರು, ಹಾಲು ಅರ್ಪಿಸಿ ತಮ್ಮ ಭಕ್ತ ಸಮರ್ಪಿಸಿದರು. ಹೊಸಪೇಟೆ ನಗರದ ಈಶ್ವರ ದೇವಸ್ಥಾನ, ರಾಣಿಪೇಟೆಯ ನಾಗರಕಟ್ಟಿ, ಡ್ಯಾಂ ರಸ್ತಗೆಯ ನಾಗರಕಟ್ಟೆಗಳಲ್ಲಿ ಹಾಗೂ ವಿವಿದ ದೇವಾಲಯಗಳಲ್ಲಿರುವ ನಾಗರಕಟ್ಟೆಯಲ್ಲಿ ಸ್ಥಾಪಿತ ನಾಗದೇವರಿಗೆ ಅದರಲ್ಲೂ ಮುಖ್ಯವಾಗಿ ಹೊಸಪೇಟೆ ತಾಲೂಕು ಬುಕ್ಕಸಾಗರದ ಏಳುಹೇಡೆ ನಾಗದೇವರಿಗಂತೂ ಸಾಲುಗಟ್ಟದ ನಿಂತ ಮಹಿಳೆಯರು ವಿಶೇಷ ಪೂಜೆ ಹಾಗೂ ಹಾಲೆರೆಯುವ ಕಾಯಕವನ್ನು ಮುಂದುವರೆಸಿದ್ದರು.
One attachment • Scanned by Gmail