ನಾಗತಿಬಸಾಪುರದಲ್ಲಿ ದತ್ತಾತ್ರೇಯ ಜಯಂತಿ

ಹೂವಿನಹಡಗಲಿ ಡಿ 30: ತಾಲೂಕಿನ ನಾಗತಿಬಸಾಪುರ ಗ್ರಾಮದ ಶಿರಡಿ ಸಾಯಿಬಾಬಾ ಸನ್ನಿಧಿಯಲ್ಲಿ ಶ್ರೀಗುರು ದತ್ತಾತ್ರೇಯ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಬೆಳಿಗ್ಗೆ ಸಾಯಿಬಾಬಾ ಮೂರ್ತಿಗೆ ಕ್ಷೀರಾಭಿಷೇಕ, ಕಾಕಾಡಾರತಿ ನೆರವೇರಿಸಿದ ಬಳಿಕ ದತ್ತಾತ್ರೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಭಕ್ತರು ಸಾಮೂಹಿಕವಾಗಿ ಗುರು ಚರಿತ್ರೆಯನ್ನು ಪಾರಾಯಣ ಮಾಡಿದರು. ಹರಪನಹಳ್ಳಿಯ ಜ್ಞಾನೇಶ್ವರ ಮಹಾರಾಜ ತಂಡದವರು ಫಂಡರಿ ಸಂಪ್ರದಾಯ ಭಜನೆ ನೆರವೇರಿಸಿದರು.
ನಂದಿಪುರ ಪುಣ್ಯಕ್ಷೇತ್ರದ ಮಹೇಶ್ವರ ಸ್ವಾಮೀಜಿ, ಉತ್ತಂಗಿಯ ಸೋಮಶಂಕರ ಸ್ವಾಮೀಜಿ, ಸಾಯಿ ಸನ್ನಿಧಿ ಸೇವಾ ಸಮಿತಿಯ ಎಂ. ನಿಂಗಪ್ಪ ಇತರರು ಭಾಗವಹಿಸಿದ್ದರು.