ನಾಗಣ್ಣ ಪಾಟೀಲ್ ಗೆ ಡಾಕ್ಟರೇಟ್

ಜೇವರ್ಗಿ:ಸೆ.7:ಶ್ರೀ ನಾಗಣ್ಣ ಬಸನಗೌಡ ಪಾಟೀಲ್ ಇವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರಗಿಯು ಡಾಕ್ಟರೇಟ್ ಪದವಿ ನೀಡಿದೆ. ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರಗಿಯ ಸಮಾಜಶಾಸ್ತ್ರ ಸಂಶೋಧನೆ ಹಾಗು ಅಧ್ಯಯನ ವಿಭಾಗದಲ್ಲಿ
ಇವರು ” ಸರಕಾರಿ ಕಾರ್ಯಕ್ರಮಗಳ ಮೂಲಕ ಮಹಿಳಾ ಸಬಲೀಕರಣ, ಯಾದಗಿರಿ ಜಿಲ್ಲೆಯ ಸಮಾಜಶಾಸ್ತ್ರೀಯ ಅಧ್ಯಯನ” ಎಂಬ ವಿಷಯಕ್ಕೆ ಕಮಲಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶ್ಯಸ್ತ್ರ ವಿಷಯದ ಪ್ರಾಧ್ಯಾಪಕರಾದ ಶ್ರೀಮತಿ ಡಾ ಶಾಂತ ಬಿ ಅಸ್ಟಿಗೆ ಯವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಪದವಿ ಪಡೆದಿಕೊಂಡಿದ್ದಾರೆ.