ನಾಗಡದಿನ್ನಿ : ಮಕ್ಕಳ ಸ್ನೇಹಿ ಗ್ರಾ.ಪಂ. ಪುಸ್ತಕ ಸಂಗ್ರಹ ಅಭಿಯಾನ

ಜೀವನವನ್ನು ಸಾರ್ಥಕವಾಗಿ ಬದುಲು ಪುಸ್ತಕ ಆಸರೆ ?
ದೇವದುರ್ಗ.ಡಿ.೨೬- ಮೌಲ್ಯಗಳನ್ನು ವ್ಯಕ್ತಿಗಳ ಮನಸ್ಸಿನಲ್ಲಿ ಆಳವಾಗಿ ಬಿತ್ತುವುದರಲ್ಲಿ ಪುಸ್ತಕಗಳು ಮತ್ತು ಓದಿನ ಪಾತ್ರ ಬಹಳ ಮಹತ್ತರವಾದದ್ದು, ಇಂದಿನ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಯುಗದಲ್ಲಿ ಓದು ಪ್ರವೃತ್ತಿ ಕ್ರಮೇಣ ಕ್ಷೀಣಿತುತ್ತಿದೆ. ಓದುಗರನ್ನು ಗ್ರಂಥಾಲಯಕ್ಕೆ ಮರಳಿ ಕರೆತರುವಲ್ಲಿ ಜಾಥಾದಂತಹ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ. ಯಾವ ದೇಶದಲ್ಲಿ ಪ್ರಜೆಗಳು ಮಾಹಿತಿ ಸಾಕ್ಷರರಾಗಿರುತ್ತಾರೋ ಆ ದೇಶದಲ್ಲಿ ಸಮೃದ್ಧಿ ಮತ್ತು ಸೌಹಾರ್ದ ಸದಾ ಮನೆಮಾಡಿರುತ್ತೆ ಎಂದು ನಾಗಡದಿನ್ನಿ ಪ್ರೌಢ ಶಾಲೆ ಮುಖ್ಯಗುರು ಎಸ್.ಡಿ.ಪಧ್ಮಜಾ ಹೇಳಿದರು.
ಅವರು ನಾಗಡದಿನ್ನಿ ಗ್ರಾಮದಲ್ಲಿ ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ್ ಹಾಗು ಓದು ಬೆಳಕು ಕಾರ್ಯಕ್ರಮದಡಿ ವಿದ್ಯಾರ್ಥಿಗಳಲ್ಲಿ ಹಾಗೂ ಪಾಲಕರ, ಸಮುದಾಯದ ಹೆಚ್ಚಿನ ಜ್ಞಾನಾರ್ಜನೆ ಹೆಚ್ಚಿಸುವ ಉದ್ಧೇಶದಿಂದ ಜ್ಞಾನ ಸಂಗ್ರಹಕ್ಕಾಗಿ ಮನೆ ಮನೆಯಿಂದ ಪುಸ್ತಕ ಸಂಗ್ರಹಿಸುವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಡಾ|| ಎಪಿಜೆ ಅಬ್ದುಲ್ ಕಲಾಂ ಅವರ ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮ ಎಂಬ ಮಾತನ್ನು ಸನೆನಪಿಸಿಕೊಂಡರು. ಅವರು ಜಾಥಾದಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದು ಅವರನ್ನು ಹುರಿದುಂಬಿಸಿದರು.
ದೈಹಿಕ ಶಿಕ್ಷಕ ಬಸವರಾಜ ಗೌಡ ಮಾತನಾಡಿ ಈ ದಿನಗಳಲ್ಲಿ ಟಿವಿ ರೇಡಿಯೋಗಳ ಅಬ್ಬರದ ಪ್ರಚಾರದಲ್ಲಿ ಎಲ್ಲಿ ಪುಸ್ತಕಗಳು ಅಸ್ತಂಗತವಾಗುವೋ ಎಂಬ ಭಯ ಆವರಿಸಿದೆ. ಆದರೆ ಪುಸ್ತಕಗಳ ಸ್ಥಾನವನ್ನು ಬೇರೆ ಯಾವ ಮಾದ್ಯಮಗಳು ತುಂಬಲು ಸಾಧ್ಯವಿಲ್ಲ . ಮನೆ ಮನೆಗಳಲ್ಲಿ ಚಿಕ್ಕ ಪುಸ್ತಕಗಳ ಸಂಗ್ರಹ ಅವಶ್ಯ ಇರಬೇಕು ಅವುಗಳಿಂದ ಮನೆಯ ಮಕ್ಕಳಲ್ಲಿ ಓದುವ ಅಭ್ಯಾಸ ಬೆಳೆಸುವದು ಸಾಧ್ಯವಾಗುತ್ತದೆ ಎಂದರು.
ಈ ಸಂಧರ್ಭದಲ್ಲಿ ಶಿಕ್ಷಕರಾದ ಚನ್ನಬಸಯ್ಯ ಸ್ವಾಮಿ, ಘಾಳೆಪ್ಪ ಬೆಳಗುಂಪಿ, ಸುದಾಕರ್ ಪಾಟೀಲ್, ರಾಮಪ್ಪ, ಶ್ರೀನಿವಾಸ ಹೆಳವಾರ, ಸಂಗಪ್ಪ. ಮುಕ್ತಾಯಿ, ನಿರ್ಮಲ ಪಾಟೀಲ್, ಹಾಗೂ ವಿದ್ಯಾರ್ಥಿಗಳು ಇದ್ದರು.

ಪೋಟೋ೨೬ಡಿವಿಡಿ,೪