ನಾಗಡದಿನ್ನಿ ಪ್ರೌಢಶಾಲೆ : ರಾಜ್ಯ ಮಟ್ಟಕ್ಕೆ ಆಯ್ಕೆ

ದೇವದುರ್ಗ.ನ.೧೮- ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಲಬುರಗಿ ವಿಭಾಗ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ತಾಲೂಕಿನ ನಾಗಡದಿನ್ನಿ ಪ್ರೌಢಶಾಲೆ ವಿದ್ಯಾರ್ಥಿನಿ ಸುಶೀಲಾ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ವಿಭಾಗ ಮಟ್ಟದಲ್ಲಿ ರಾಯಚೂರು ಜಿಲ್ಲಾ ತಂಡದಲ್ಲಿ ತ್ರಿಶಾ, ಅರ್ಪಿತಾ ಜತೆ ಸುಶೀಲ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈ ಮೂವರು ಒಳಗೊಂಡ ರಾಯಚೂರು ತಂಡ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ ಎಂದು ಮುಖ್ಯಶಿಕ್ಷಕ ಎಚ್.ಡಿ.ಪದ್ಮಜಾ ತಿಳಿಸಿದ್ದಾರೆ. ವಿದ್ಯಾರ್ಥಿಗೆ ದೈಹಿಕ ಶಿಕ್ಷಕ ಬಸವರಾಜಗೌಡ ಮಾರ್ಗದರ್ಶನ ನೀಡಿದ್ದರು. ವಿದ್ಯಾರ್ಥಿ ಸಾಧನೆಗೆ ಶಿಕ್ಷಕರಾದ ಸುಧಾಕರ್ ಪಾಟೀಲ್, ಶ್ರೀನಿವಾಸ್, ಗಾಳೆಪ್ಪ, ರಾಮಪ್ಪ, ಚನ್ನಯ್ಯ ಸ್ವಾಮಿ, ಬಾಲಕಿ ತಂದೆ ಸಿದ್ದನಗೌಡ ಹರ್ಷ ವ್ಯಕ್ತಪಡಿಸಿದ್ದಾರೆ.
ಕೊಪ್ಪಳದಲ್ಲಿ ನಡೆದ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ರಾಯಚೂರು ಜಿಲ್ಲಾ ತಂಡ. ವಿದ್ಯಾರ್ಥಿಗಳಾದ ಸುಶೀಲಾ, ತ್ರಿಶಾ, ಅರ್ಪಿತಾ, ದೈಹಿಕ ಶಿಕ್ಷಕ ಬಸವರಾಜ ಇದ್ದರು.