ನಾಗಡದಿನ್ನಿಯಲ್ಲಿ ಕರೆಮ್ಮ ನಾಯಕಗೆ ಹೂವಿನ ಸುರಿಮಳೆ

ದೇವದುರ್ಗ.ಜ.೦೧- ರಾಜ್ಯದಲ್ಲಿ ಬರುವ ೨೦೨೩ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಜೆಡಿಎಸ್ ಅಧಿಕಾರಕ್ಕೆ ಬಂದರೆ ಮಾತ್ರ ರಾಜ್ಯದ ರೈತರು ದಲಿತರು, ಅಲ್ಪಸಂಖ್ಯಾತರು, ಬಡವರ ಬದುಕು ಹಸನಾಗಲು ಸಾಧ್ಯ ಎಂದು ಜೆಡಿಎಸ್ ಅಭ್ಯರ್ಥಿ ಕರೆಮ್ಮ ನಾಯಕ ಹೇಳಿದರು .
ಅವರು ನಾಗಡದಿನ್ನಿ ಗ್ರಾಮದಲ್ಲಿ ಜೆಡಿಎಸ್ ನಿಂದ ಹಮ್ಮಿಕೊಂಡ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.ತಾಲೂಕಿನ ಪ್ರತಿ ಹಳ್ಳಿ ಹಳ್ಳಿಗೂ ಹೋದರೆ ಕಾರ್ಯಕರ್ತರು ನನಗೆ ಆತ್ಮೀಯವಾಗಿ ಗೌರವಿಸಿ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದಾರೆ ಕಾರ್ಯಕರ್ತರ ಬೆಂಬಲವೇ ನನಗೆ ಶಕ್ತಿಯಾಗಿದೆ ಜನರ ಪ್ರೀತಿ ವಿಶ್ವಾಸ ನನ್ನ ಮೇಲಿದ್ದು, ನಮ್ಮ ಪಕ್ಷದ ಕಾರ್ಯಕರ್ತರು ಪ್ರತಿ ಹೆಜ್ಜೆಯಲ್ಲಿ ಶಕ್ತಿ ತುಂಬುತ್ತಿದ್ದಾರೆ ಕ್ಷೇತ್ರದ ಮತದಾರರು ಶಕ್ತಿ ಕೊಡುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಈ ಬಾರಿ ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ಪರ ವಾತಾವರಣವಿದ್ದು, ತಾಲೂಕಿನ ಮತದಾರರು ಋಣ ತೀರಿಸುವ ಕಾಲ ಹತ್ತಿರ ಬಂದಿದೆ. ಹೀಗಾಗಿ ೩೩ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ವಾಸ್ತವ ಕೈಗೊಳ್ಳಲಾಗಿದ್ದು, ಅಲ್ಲೇ ಇದ್ದುಕೊಂಡು ಜನರ ಸಮಸ್ಯೆ ಹಾಲಿಸಲು ನನಗೆ ಉತ್ತಮ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.e
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಬುಡ್ಡನಗೌಡ ಪಾಟೀಲ್ ಜಾಗಟಗಲ್, ರಮೇಶ್ ನಾಯಕ್, ಇಸಾಕ್ ಮೇಸ್ತ್ರಿ,ಮೈಹಿಬೂಬ ಹೆಗ್ಗಡದಿನ್ನಿ, ರಮೇಶ್ ದೊಡ್ಮನಿ ತಿಪ್ಪಲದಿನ್ನಿ , ಶಿವರಾಜ್ ಹಿರೇಮಠ, ಶಾಂತಕುಮಾರ್, ಮೌಲಾಸಾಬ್ ಗೋಕುಲಸಾಬ ಗೌರಂಪೇಟೆ, ದಾವೂದ್ ಔಂಟಿ,ತಿಮ್ಮರೆಡ್ಡಿ ಜಾಗಟಗಲ್, ರೇಣುಕಾ.ಎಂ.ಸ್ವಾಮಿ ಸೇರಿದಂತೆ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮುಖಂಡರು ಇದ್ದರು.