ನಾಗಠಾಣದಲ್ಲಿ ಹನುಮ ಜಯಂತಿ

ವಿಜಯಪುರ,ಏ.24: ತಾಲೂಕಿನ ನಾಗಠಾಣ ಗ್ರಾಮದಲ್ಲಿ ಹನುಮಾನ ಜಯಂತಿಯನ್ನು ಶ್ರದ್ಧೆ, ಭಕ್ತಿಯಿಂದ ಆಚರಿಸಲಾಯಿತು.
ಗ್ರಾಮದ ಜನತೆ ಹನುಮಾನ ಗುಡಿಗೆ ಆಗಮಿಸಿ, ಶ್ರದ್ಧಾ,ಭಕ್ತಿಯಿಂದ ಪೂಜೆ ಸಲ್ಲಿಸಿದರು. ಹನುಮಂತನು ಮಹಾದೇವನ ಅವತಾರವಾಗಿದ್ದು, ಅಷ್ಟ ಸಿದ್ಧಿ, ನವ ನಿಧಿ, ಶಾಶ್ವತವಾದ ಶಕ್ತಿ, ನಿಷ್ಠೆ ಮತ್ತು ಭಕ್ತಿಯ ಪ್ರತೀಕವಾಗಿದ್ದು, ಹನುಮಂತನಿಗೆ ಸಲ್ಲಿಸಿದ ಪ್ರಾರ್ಥನೆಯಿಂದ ಎಲ್ಲರ ಜೀವನದಲ್ಲಿ ಸಾಮರಸ್ಯ, ಶಕ್ತಿ ಮತ್ತು ಯಶಸ್ಸನ್ನು ತರುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿ ಈಗಲೂ ಜನಜನಿತವಾಗಿದೆ.
ಹನುಮಂತನ ವಿಗ್ರಹಕ್ಕೆ ತುಪ್ಪದಿಂದ ಮತ್ತು ಸಾಸಿವೆ ಎಣ್ಣೆಯಿಂದ ದೀಪ ಹಚ್ಚಿ ಹನುಮನಿಗೆ ಭಕ್ತಿಯಿಂದ ನಮಿಸಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಲ್ಲು ಹೂಗಾರ, ನವೀನ ಗುಣಕಿ, ಪ್ರಶಾಂತ ತಳವಾರ, ಸಿದ್ದು ಕನ್ನೊಳ್ಳಿ, ರಾಜು ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.