ನಾಗಠಾಣದಲ್ಲಿ ಮೌನೇಶ್ವರರ ರಥೋತ್ಸವ

ವಿಜಯಪುರ: ಮಾ.29:ಹಿಂದೂ-ಮುಸ್ಲಿಂರ ಭಾವೈಕ್ಯತೆಯ ಹರಿಕಾರರಾಗಿರುವ ಮೌನೇಶ್ವರರ ರಥೋತ್ಸವವು ಮಂಗಳವಾರ ಸಂಜೆ ನಾಗಠಾಣ ಗ್ರಾಮದಲ್ಲಿ ಅಪಾರ ಭಕ್ತರ ಜಯಘೋಷಗಳ ನಡುವೆ ಸಡಗರ-ಸಂಭ್ರಮದೊಂದಿಗೆ ಅದ್ದೂರಿಯಾಗಿ ನಡೆಯಿತು.
‘ಏಕ್ ಲಾಕ್ ಐಂಸಿ ಹಜಾರ್ ಪಾಚೋ ಪೀರ್ ಪೈಗಂಬರ್ ಜೀತಾ ಪೈಗಂಬರ್ ಮೌನೋದ್ದಿ?ನ್, ಕಾಶೀಪತಿ ಗಂಗಾಧರ ಹರಹರ ಮಹಾದೇವ” ಎನ್ನುವ ಮೌನೇಶ್ವರರಿಗೆ ಭಕ್ತರಿಂದ ಉದ್ಗರಿಸುವ ಜಯಘೋಷಗಳು ಕೇಳಿಬಂದವು.
ಭಾವೈಕ್ಯದ ಸಂಕೇತ ಸಾರುವ ಕೇಸರಿ ಮತ್ತು ಹಸಿರು ಧ್ವಜಗಳನ್ನು ಹೊತ್ತ ಅಲಂಕೃತ ರಥಕ್ಕೆ ಭಕ್ತರು ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಮೆರೆದರು. ಭಕ್ತರ ಹರ್ಷೋಧ್ಘಾರ, ಕರತಾಡನ ಮತ್ತು ವಾದ್ಯಮೇಳಗಳ ಮಧ್ಯೆ ರಥವು ಸುಗಮವಾಗಿ ಬಂದು ತಲುಪಿತು.
ಮಹಾಬಲೇಶ್ವರ ಆಚಾರ್ಯ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ ಅರಕೇರಿ,ಸುಭಾಸ ಬಡಿಗೇರ, ಶ್ರೀಧರ ಬಡಿಗೇರ,ಶ್ರೀಶೈಲ ಪತ್ತಾರ,ದೇವು ಪತ್ತಾರ, ಸುಭಾಸ ಪತ್ತಾರ,ಕಲ್ಲಪ್ಪ ಪತ್ತಾರ,ರಮೇಶ ಬಡಿಗೇರ,ರಾಜು ಪತ್ತಾರ,ಗಂಗಾಧರ ಪತ್ತಾರ,ಅಶೋಕ ಸುತಾರ ಚಪ್ಪಳಗಾಂವ,ನಾಗು ಬಡಿಗೇರ,ಭಗವಂತ ಬಡಿಗೇರ ಹಾಗೂ ವಿಶ್ವಕರ್ಮ ಸಮಾಜದ ಬಾಂಧವರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತವೃಂದ ಪಾಲ್ಗೊಂಡಿದ್ದರು.