ನಾಗಇದ್ಲಾಯಿ ಕೆರೆಯಲ್ಲಿ ಬಿರುಕು ಆತಂಕದಲ್ಲಿ ಗ್ರಾಮಸ್ಥರು

ಚಿಂಚೋಳಿ,ಆ.1- ತಾಲೂಕಿನ ನಾಗಇದ್ಲಾಯಿ ಗ್ರಾಮದ ಕೆರೆ ಸಂಪೂರ್ಣ ಭರ್ತಿಯಾಗಿದ್ದು, ನೀರಿನ ಒತ್ತಡದಿಂದ ಕೆರೆಯ ಗೊಡೆÉ ಬಿರುಕು ಬಿಟ್ಟಿದೆ.
ಮೇಲಿಂದ ಹರಿದು ಬರುವ ನೀರಿನ ಒತ್ತಡ ತುಂಬಾ ಹೆಚ್ಚಾಗುತ್ತಿದೆ. ಯಾವುದೇ ಕ್ಷಣದಲ್ಲಿ ಒಡೆಯುವ ಭೀತಿ ಎದುರಾಗಿದ್ದು, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗೌತಮ್ ಪಾಟೀಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತವಾದ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಯಾವುದೇ ಕಾರಣಕ್ಕೂ ಕೆರೆ ಒಡೆಯದಂತೆ ತುರ್ತು ಕ್ರಮ ಕೈಗೊಳ್ಳುವಂತೆ ಅವರು, ಅಧಿಕಾರಿಗಳಿಗೆ ಸೂಚಿಸಿದರು ಈ ಸಂದರ್ಭದಲ್ಲಿ ಕೆರೆಯ ಕೆಳಭಾಗದಲ್ಲಿ ಬರುವ ಹೊಲದ ರೈತರು ಮುನ್ನೆಚ್ಚರಿಕೆ ವಹಿಸಬೇಕು ಹಾಗೂ ಕೆರೆ ಕೆಳಗಡೆ ಬರುವ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಗೋಪಾಲ್ ರೆಡ್ಡಿ ಕೊಳ್ಳುರ್ ಸಂಗಮೇಶ್ ಪಾಟೀಲ್ ಪ್ರಕಾಶ್ ರೆಡ್ಡಿ ಪ್ರಭಾಕರ್ ರೆಡ್ಡಿ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಾದ ಶಿವಶರಣಪ್ಪ ಕೇಶ್ವಾರ, ಮತ್ತು ಗ್ರಾಮದ ರೈತರು ಉಪಸ್ಥಿತರಿದ್ದರು.